ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕ್ಷಿಪಣಿ ಪರೀಕ್ಷೆಯ ದೃಶ್ಯಗಳನ್ನು ಹಂಚಿಕೊಂಡಿರುವ ನೌಕಪಡೆ, ದೀರ್ಘ ಶ್ರೇಣಿಯ ನಿಖರ ಆಕ್ರಮಣಕ್ಕಾಗಿ ಬಹು ಹಂತದ ವಿರೋಧಿ ಹಡಗುಗಳನ್ನು ನಾಶಪಡಿಸಬಲ್ಲಾ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದೆ.
ಭಾರತೀಯ ನೌಕಾಪಡೆಯು ಯಾವುದೇ ಕ್ಷಣ, ಎಲ್ಲಿಯೇ ಆದರೂ ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ, ಭವಿಷ್ಯಕ್ಕೆ ಸಿದ್ಧವಾಗಿದೆ ಎಂದು ಹೇಳಿದೆ.
ಯುದ್ಧ ನೌಕೆಗಳ ಸಮೂಹದಿಂದ ಬ್ರಹ್ಮೋಸ್ ವಿರೋಧಿ ಹಡುಗು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡುವುದನ್ನು ದೃಶ್ಯಗಳು ತೋರಿಸುತ್ತವೆ. ಇದು ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನವಾಗಿದೆ.




