ಗುವಾಹಟಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ದೇಶದ್ರೋಹದ ಹೇಳಿಕೆಗಳನ್ನು ನೀಡಿದ ಆರೋಪದ ಮೇರೆಗೆ ಅಸ್ಸಾಂನಲ್ಲಿ ಕನಿಷ್ಠ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.
ಪ್ರತಿಪಕ್ಷದ ಎಐಯುಡಿಎಫ್ ಶಾಸಕ ಅಮಿನಲ್ ಇಸ್ಲಾಂ ಅವರನ್ನು ಸಹ ಬಂಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, 'ಭಾರತ ಮತ್ತು ಪಾಕಿಸ್ತಾನದ ನಡುವೆ ಹೋಲಿಕೆಯೇ ಇಲ್ಲ. ಈ ಎರಡು ರಾಷ್ಟ್ರಗಳು ಶತ್ರು ರಾಷ್ಟ್ರಗಳಾಗಿವೆ. ನಾವೂ ಹಾಗೆಯೇ ಇರಬೇಕು. ಅಗತ್ಯ ಬಿದ್ದಲ್ಲಿ, ಬಂಧಿತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಲಾಗುವುದು' ಎಂದು ಹಿಮಂತಾ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಭಯೋತ್ಪಾದಕರು ಮಂಗಳವಾರ ಗುಂಡಿನ ದಾಳಿ ನಡೆಸಿ 26 ಮಂದಿಯನ್ನು ಕೊಂದು ಹಾಕಿದ್ದರು.




