ನವದೆಹಲಿ: 'ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹಲವು ತಿಂಗಳಿಂದ ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ. ಹೀಗಿರುವಾಗ ಪಟಾಕಿಗಳ ಮಾರಾಟ, ತಯಾರಿಕೆ ಅಥವಾ ಸಂಗ್ರಹಕ್ಕೆ ವಿಧಿಸಿರುವ ನಿಷೇಧವನ್ನು ರದ್ದು ಮಾಡಲು ಸಾಧ್ಯವೇ ಇಲ್ಲ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
'ಬೀದಿಯಲ್ಲಿ ಕೆಲಸ ಮಾಡುವ ದೊಡ್ಡ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ತೊಂದರೆಗೆ ಒಳಗಾಗಿದ್ದಾರೆ.
ತಮ್ಮ ತಮ್ಮ ಮನೆಗಳಲ್ಲಿ ಏರ್‌ಪ್ಯುರಿಫಯರ್‌ಗಳನ್ನು ಕೊಂಡುಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಹೇಳಿದರು.
'ಪಟಾಕಿಗಳಿಂದ ಉಂಟಾಗಿರುವ ಈ ಮಾಲಿನ್ಯವು ತಗ್ಗಿದೆ ಎಂದು ನಮಗೆ ಅನ್ನಿಸದ ಹೊರತು ನಾವು ನಮ್ಮ ಹಿಂದಿನ ಆದೇಶಗಳನ್ನು ರದ್ದು ಮಾಡುವುದಿಲ್ಲ' ಎಂದು ಪೀಠ ಹೇಳಿತು.




