ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಭಜನಾ ಸಂಕೀರ್ತನೋತ್ಸವ ಮಾ.27 ರಿಂದ ಪ್ರಾರಂಭಗೊಂಡು 22 ದಿನಗಳ ಕಾಲ ಮುಂದುವರಿದು ಇದರ ಸಮಾರೋಪ ಸಮಾರಂಭ ದೇವಸ್ಥಾನದಲ್ಲಿ ಎ.17 ರಂದು ರಾತ್ರಿ ನಡೆಯಿತು.
ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ರಾಜೇಶ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿಗಳಾದ ನಾರಾಯಣಯ್ಯ, ಮುರಳಿ ಗಟ್ಟಿ, ಉಪಾಧ್ಯಕ್ಷ ಗಿರೀಶ್ ಕೂಡ್ಲು, ಜಯಾನಂದ ಕುಮಾರ್ ಹೊಸದುರ್ಗ, ಭಜನಾ ಸಮಿತಿ ಅಧ್ಯಕ್ಷ ಕೆ.ಜಗದೀಶ್ ಕೂಡ್ಲು, ಮಹಿಳಾ ಸಮಿತಿ ಸಂಚಾಲಕಿ ಶೋಭಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಜನಾ ಸೇವೆಯಲ್ಲಿ ಸಹಕರಿಸಿದ ಹಿಮ್ಮೇಳದವರನ್ನು ಗೌರವಿಸಲಾಯಿತು.




.jpg)
