ಉಪ್ಪಳ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು, ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು, ಒನ್‍ಸೈಟ್ ಎಸ್ಪಿಲೋರ್ ಲುಕೋಟಿಕಾ ಫೌಂಡೇಶನ್ ಬೆಂಗಳೂರು, ಡಾ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಸೇವಾ ಭಾರತಿ ಜೋಡುಕಲ್ಲು, ಕಯ್ಯಾರು ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಇಂದು(ಏ.27) ಬೆಳಗ್ಗೆ 9 ರಿಂದ ಜೋಡುಕಲ್ಲು ಕೇಶವ ಶಿಸು ಮಂದಿರ ತಪೋವನದಲ್ಲಿ ಆಯೋಜಿಸಲಾಗಿದೆ. ಶಿಬಿರವನ್ನು ಕೊಂಡೆವೂರು ಮಠಾಧೀಶ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸುವರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸುವರು. ಡಾ. ಮುರಳಿಧರ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಶಿಬಿರದ ಪ್ರಯೋಜನ ಪಡೆಯಲು ಆಸಕ್ತರು ಬೆಳಗ್ಗೆ 8:30ರ ಮೊದಲು ಹೆಸರು ನೊಂದಾಯಿಸಬೇಕು, ಶಿಬಿರದಲ್ಲಿ ಪಾಲ್ಗೊಂಡು ಅಗತ್ಯವಿರುವವರಿಗೆ ವೈದ್ಯರ ಸೂಚನೆಯಂತೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು, ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುವುದು ಮತ್ತು ಮಧುಮೇಹ (ಡಯಾಬಿಟಿಸ್) ಕಣ್ಣಿನ ನರ ತಪಾಸಣೆ ಮಾಡಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.


