ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ 'ಬೇಕಲ ರಾಮ ನಾಯಕ ಅವರ ಬದುಕು-ಬರಹ' ದ ಕುರಿತು ಸ್ಮರಣಾಂಜಲಿ ಕಾರ್ಯಕ್ರಮವು ಏ.27ರಂದು ಮಧ್ಯಾಹ್ನ 2ರಿಂದ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ನಡೆಯುವ ವಸಂತ ಚುಟುಕು ಕವಿಗೋಷ್ಠಿ ಯಲ್ಲಿ ಕಾಸರಗೋಡು ಜಿಲ್ಲೆಯ ಆಸಕ್ತ ಕವಿಗಳಿಗೆ ಚುಟುಕುಗಳನ್ನು ವಾಚಿಸಲು ಅವಕಾಶ ಕಲ್ಪಿಸಲಾಗಿದೆ. ಚುಟುಕಕ್ಕೆ ವಿಷಯ ನಿರ್ಬಂಧವಿರುವುದಿಲ್ಲ. ಒಬ್ಬರು 4 ಸಾಲಿನ ಉತ್ತಮ ಎನಿಸುವ ಮೂರು ಚುಟುಕವನ್ನು ವಾಚಿಸಬಹುದು. ಆಸಕ್ತರು ಏ. 20ರ ಮೊದಲು 9447490344 ಸಂಖ್ಯೆಗೆ ವಾಟ್ಸಪ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಬೇಕೆಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


