ಕಾಸರಗೋಡು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳಲ್ಲಿ ಕಂಪ್ಯೂಟರ್ ಅಸಿಸ್ಟೆಂಟ್, ಎಲ್.ಡಿ ಟೈಪಿಸ್ಟ್, ಆಫೀಸ್ ಅಟೆಂಡೆಂಟ್, ಹಾಗೂ ಫ್ಯೂನ್ ಇತ್ಯಾದಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲು ಅರ್ಹರಾಗಿರುವ ನಿವೃತ್ತ ನ್ಯಾಯಾಲಯ ನೌಕರರು ಮತ್ತು ಇತರ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಅಸಿಸ್ಟೆಂಟ್, ಎಲ್.ಡಿ ಟೈಪಿಸ್ಟ್ ಹುದ್ದೆಯ ತಿಂಗಳ ವೇತನ 21,175 ರೂ ಆಗಿದೆ. ಆಫೀಸ್ ಅಟೆಂಡೆಂಟ್, ಫ್ಯೂನ್ ಹುದ್ದೆಯ ತಿಂಗಳ ವೇತನವು 18,390 ರೂ ಆಗಿದೆ. ಪಿ.ಎಸ್.ಸಿ ನಿಶ್ಚಯಿಸಿದ ಅರ್ಹತೆ ಮತ್ತು ಐದು ವರ್ಷಗಳ ಕೆಲಸದ ಅನುಭವ ಆರ್ಹತೆಯಾಗಿದೆ. ಅರ್ಜಿದಾರರು 62 ವರ್ಷಗಳನ್ನು ಪೂರ್ಣಗೊಳಿಸಿರಬಾರದು. 62 ವರ್ಷ ಪೂರ್ಣಗೊಂಡ ನಂತರ ಅವರನ್ನು ಸೇವೆಯಿಂದ ನಿವೃತ್ತರಾಗಿಸಲಾಗುವುದು. ಜಿಲ್ಲಾ ನ್ಯಾಯಾಧೀಶರು ಮತ್ತು ಸರ್ಕಾರದ ಪರವಾಗಿ ನೇಮಕಗೊಳ್ಳುವ ವ್ಯಕ್ತಿಯ ನಡುವೆಯಿರುವ ಒಪ್ಪಂದವನ್ನು ನಮೂದಿಸಬೇಕು. ನಿಗದಿತ ನಮೂನೆಯ ಅರ್ಜಿಗಳನ್ನು, ವಯೋಮಿತಿ ಮತ್ತು ಅರ್ಹ ಕೆಲಸದ ಅನುಭವವನ್ನು ದೃಢೀಕರಿಸುವ ಪ್ರಮಾಣಪತ್ರಗಳೊಂದಿಗೆ ದೃಢೀಕರಿಸಿದ ಪ್ರತಿಗಳ ಸಹಿತ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಕಾಸರಗೋಡು-671123 ಎ ಎಂಬ ವಿಳಾಸಕ್ಕೆ ಎಪ್ರಿಲ್ 15ರಂದು ಸಂಜೆ 5 ಗಂಟೆಯವರೆಗೆ ನೇರವಾಗಿ ಆಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಕವರಿನ ಮೇಲೆ ವಿಶೇಷವಾಗಿ ಗುತ್ತಿಗೆ ನೇಮಕಾತಿಗಾಗಿರುವ ಅರ್ಜಿ ಎಂದು ಗುರುತಿಸಬೇಕು. ಹೆಚ್ಚಿನ ವಿವರಗಳಿಗಾಗಿ https://districts.




