ಕಾಸರಗೋಡು: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ವಸತಿಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ನಂತರ, ಈ ದೃಶ್ಯಾವಳಿಯನ್ನು ತನ್ನ ಸ್ನೇಹಿತಗೆ ಇನ್‍ಸ್ಟಾಗ್ರಾಂ ಮೂಲಕ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿ ವೆಳ್ಳರಿಕುಂಡು ಠಾಣೆ ವ್ಯಾಪ್ತಿಯ ಜಯಕೃಷ್ಣನ್ ಅಲಿಯಾಸ್ ಅಪ್ಪು ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವೆಳ್ಳರಿಕುಂಡು ಆಸುಪಾಸಿನ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಆರೋಪಿ ವಿದೇಶದಲ್ಲಿದ್ದು, ಪೊಲೀಸರು ಈತನನ್ನು ಊರಿಗೆ ಕರೆತರುವ ಪ್ರಯತ್ನದಲ್ಲಿದ್ದಾರೆ.
2024ರ ಫೆಬ್ರವರಿ 4ರಂದು ಘಟನೆ ನಡೆದಿದ್ದು, ಯುವತಿಯನ್ನು ಮಂಗಳೂರಿನ ವಸತಿಗೃಹವೊಂದಕ್ಕೆ ಕರೆದೊಯ್ದ ಜಯಕೃಷ್ಣನ್, ಅಲ್ಲಿ ಕಿರುಕುಳ ನೀಡಿರುವುದಲ್ಲದೆ, ಕಿರುಕುಳದ ದೃಶ್ಯ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು, ವಿದೇಶಕ್ಕೆ ತೆರಳಿದ ನಂತರ ಈ ದೃಶ್ಯಗಳನ್ನು ಆತನ ಸ್ನೇಹಿತಗೆ ಇನ್‍ಸ್ಟಾಗ್ರಾಂ ರವಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.




