ಕಾಸರಗೋಡು: ಪೆರುಂಬಳ ಸೇತುವೆಯಿಂದ ಚಂದ್ರಗಿರಿ ಹೊಳೆಗೆ ಹಾರಿದ್ದ ಚೆಂಗಳ ಪಡಿಙËರ್‍ಮೂಲೆ ಬಾಫಕಿನಗರದ ಕಣ್ಣರ ನಿವಾಸಿ ಮಹಮ್ಮದ್ ಎಂಬವರ ಪುತ್ರ ಶೆರೀಫ್(45)ಅವರ ಮೃತದೇಹ ಸೇತುವೆ ಸನಿಹದ ಹೊಳೆಯಲ್ಲಿ ಪತ್ತೆಯಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಊರವರು ನಡೆಸಿದ ಹುಡುಕಾಟದಿಂದ ಮೃತೇಹ ಪತ್ತೆಹಚ್ಚಲಾಗಿದೆ.
ಶೆರೀಫ್ ಮಂಗಳವಾರದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸುದಾಖಲಿಸಿಕೊಂಡಿದ್ದರು. ಈ ಮಧ್ಯೆ ಶರೀಫ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಅವರು ಧರಿಸಿದ್ದ ಚಪ್ಪಲಿ ಪೆರುಂಬಳ ಸೇತುವೆ ಬಳಿ ಪತ್ತೆಯಾಗಿದ್ದು, ಶೆರೀಫ್ ನೀರುಪಾಲಾಗಿರುವ ಬಗ್ಗೆ ಸಂಶಯದಿಂದ ಗುರುವಾರ ಬೆಳಗ್ಗಿನಿಂದಲೇ ಹುಡುಕಾಟ ಆರಂಭಿಸಲಾಗಿತ್ತು.





