ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯಮಟ್ಟದ ಉದ್ಘಾಟನೆಯು ಏಪ್ರಿಲ್ 21 ರಂದು ಬೆಳಿಗ್ಗೆ 10ಕ್ಕೆ ಕಾಲಿಕಡವು ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಚಾರಾರ್ಥ ಜಿಲ್ಲೆಯ ಸರ್ಕಾರಿ ನೌಕರರಿಗಾಗಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಯಿತು.
ಕ್ರಿಕೆಟ್ ಪಂದ್ಯಾಟವನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬ್ಯಾಟಿಂಗ್ ನಡೆಸುವ ಮೂಲಕ ಉದ್ಘಾಟಿಸಿದರು. ಕಾಸರಗೋಡಿನ ಲಾಡ್ರ್ಸ್ ಹಿದಾಯತ್ ನಗರದ ಹೊನಲು ಬೆಳಕಿನಿಂದ ಕೂಡಿದ ತೆರೆದ ಮೈದಾನದಲ್ಲಿ ಪಂದ್ಯ ನಡೆಯಿತು. ಸ್ಪರ್ಧೆಯಲ್ಲಿ ವಿವಿಧ ಇಲಾಖೆಗಳ 124 ಮಂದಿ ಉದ್ಯೋಗಿಗಳು ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂಧನನ್ ಮತ್ತು ವಿಭಾಗೀಯ ಅರಣ್ಯ ಅಧಿಕಾರಿ ಕೆ. ಅಶ್ರಫ್ ಉಪಸ್ಥಿತರಿದ್ದರು.





