ಕಾಸರಗೋಡು: ಚೆನ್ನೈನಲ್ಲಿ ನಡೆದ 2025 ರ ರಾಷ್ಟ್ರೀಯ ಕಾರ್ ರ್ಯಾಲಿ ಚಾಂಪಿಯನ್‍ಶಿಪ್‍ನ ಮೊದಲ ಸುತ್ತಿನ ದಕ್ಷಿಣ ಭಾರತೀಯ ರ್ಯಾಲಿಯಲ್ಲಿ ಮೂಸಾ ಶರೀಫ್ ಮತ್ತು ಕರ್ಣ ಕಡೂರ್ ಜೋಡಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಗುಡ್ಡಗಡು ರಸ್ತೆಯಲ್ಲಿ ನಡೆದ ಅತಿ ಉದ್ದದ ರ್ಯಾಲಿಯನ್ನು 2 ಗಂಟೆ, 3 ನಿಮಿಷ ಮತ್ತು 44 ಸೆಕೆಂಡುಗಳ ಕಾಲಾವಧಿಯಲ್ಲಿ ಪೂರೈಸಿ ಗುರಿ ಸಾಧಿಸಿದೆ. ಕಳೆದ ಎರಡು ದಿನಗಳಿಂದ ನಡೆದ ರಾಷ್ಟ್ರೀಯ ಕಾರು ರ್ಯಾಲಿ ಚಾಂಪಿಯನ್‍ಶಿಪ್‍ನ ಮೊದಲ ಸುತ್ತನ್ನು ಭಾರತೀಯ ಮೋಟಾರ್ ಸ್ಪೋಟ್ರ್ಸ್ ಕ್ಲಬ್‍ಗಳ ಒಕ್ಕೂಟ ಚೆನ್ನೈನಲ್ಲಿ ಆಯೋಜಿಸಿತ್ತು.
ಭಾರತದಲ್ಲಿ ತನ್ನ ಒಂಬತ್ತನೇ ಪ್ರಶಸ್ತಿಯ ಗುರಿಯೊಂದಿಗೆ ದೇಶದಲ್ಲೇ ನಂಬರ್ ಒನ್ ಸಹ-ಚಾಲಕರಾಗಿರುವ ಮೂಸಾ ಷರೀಫ್ ರೇಸ್ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಒಟ್ಟಾರೆ ಗೆಲುವು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಷರೀಫ್ ತಿಳಿಸಿದ್ದಾರೆ.
ಈ ವರ್ಷದ ರಾಷ್ಟ್ರೀಯ ಕಾರು ರ್ಯಾಲಿ ಚಾಂಪಿಯನ್‍ಶಿಪ್ ಒಟ್ಟು ಆರು ಸುತ್ತುಗಳನ್ನು ಒಳಗೊಂಡಿದ್ದು, ಮೊಗ್ರಾಲ್ ಪೆರ್ವಾಡ್‍ನವರಾದ ಶರೀಫ್ ಮತ್ತು ಕಡೂರ್ ನಿವಾಸಿ ಕರ್ಣಾ ಕಡೂರ್ ಕಡೂರ್ ಜೋಡಿ ಅರ್ಕಾ ಮೋಟಾರ್ ಸ್ಪೋರ್ಟ್‍ಗಾಗಿ ವೋಕ್ಸ್‍ವ್ಯಾಗನ್ ಪೋಲೋ ಕಾರನ್ನು ಚಾಲನೆ ಮಾಡುವ ಮೂಲಕ ಮೊದಲ ಸುತ್ತನ್ನು ಸುಲಭವಾಗಿ ಗೆದ್ದುಕೊಂಡಿದೆ.
ರ್ಯಾಲಿಯಲ್ಲಿ ಯಶಸ್ವಿಯಾದರೆ, ಒಂಬತ್ತು ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನ್ಯಾವಿಗೇಟರ್ ಎಂಬ ಗೌರವವನ್ನು ಮೂಸಾ ಷರೀಫ್ ಪಡೆಯಲಿದ್ದಾರೆ.
ಇದರೊಂದಿಗೆ, ಚೆನ್ನೈನಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಕಾರ್ ರ್ಯಾಲಿ ಚಾಂಪಿಯನ್‍ಶಿಪ್‍ನ ಎರಡನೇ ಸುತ್ತಿನಲ್ಲಿ ಮೂಸಾ ಷರೀಫ್ ಮತ್ತು ಕರ್ಣ ಕಡೂರ್ ಜೋಡಿ ಒಟ್ಟಾರೆ ಗೆಲುವು ಸಾಧಿಸಿತು. ಮೂಸಾಶೆರೀಫ್ ಕಾಸರಗೋಡು ಜಿಲ್ಲೆಯ ಕುಂಬಳೆ ಪೆರುವಾಡ್ ನಿವಾಸಿಯಾಘಿದ್ದರೆ.





