ಉಪ್ಪಳ: 2024-25 ನೇ ಸಾಲಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿ ಸಂಭ್ರಮ ಸೋಮವಾರ ನಡೆಯಿತು. ವಿದ್ಯಾಪೀಠದ ಸಂಸ್ಥಾಪಕ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟ ಜೆ.ಎಸ್.ಎಂ.ಎಂ.ಸಿ ಟಿ ಟ್ರಸ್ಟಿಗಳಾದ ಮಹಾಬಲೇಶ್ವರ ಭಟ್ ಎಡಕ್ಕಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಎಸ್.ಇ ಯಿಂದ ಮಾನ್ಯತೆ ಪಡೆದು ಸಂಸ್ಕಾರಯುತವಾದ ಶಿಕ್ಷಣ ನೀಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ವಿದ್ಯಾಪೀಠಕ್ಕೆ 4 ಲ್ಯಾಪ್‍ಟಾಪ್‍ಗಳನ್ನು ಕೊಡುಗೆಯಾಗಿ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ,ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಹಾಗೂ ಸಾಧನಾ ಮಹಾಬಲೇಶ್ವರ ಭಟ್ ಎಡಕ್ಕಾನ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಬಳಿಕ ವಿದ್ಯಾರ್ಥಿಗಳಲ್ಲಿ ಉದಯೋನ್ಮುಖ ಪ್ರತಿಭೆಯನ್ನು ಗುರುತಿಸಿ ವಿವಿಧ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ವಿತರಿಸಲಾಯಿತು. 2024-2025 ರ ನಿತ್ಯಾನಂದ ಪುರಸ್ಕಾರವನ್ನು ತ್ರಿಷಾ (10ನೇ ತರಗತಿ ), ಜಿಜಾಬಾಯಿ ಪುರಸ್ಕಾರವನ್ನು ಆರಾಧ್ಯ ಕುಲಾಲ್ (6ನೇ ತರಗತಿ) ಏಕಲವ್ಯ ಪುರಸ್ಕಾರವನ್ನು ಯಶಸ್ (8ನೇ ತರಗತಿ)Éಸ್.ಎಸ್.ಎನ್.ಟಿ.ಎಸ್ ಪ್ರಶಸ್ತಿಯನ್ನು ಸಾನ್ವಿ ವಿ ಎಸ್ (8 ನೇ ತರಗತಿ), ಉತ್ತಮ ಸೇವಾ ಪ್ರಶಸ್ತಿ ಧನುಷ್ ಮಾಧವ್ (10ನೇ ತರಗತಿ ) ಹಾಗೂ ಉತ್ತಮ ಸಾಧನಾ ಪ್ರಶಸ್ತಿಯನ್ನು ಹಳೆವಿದ್ಯಾರ್ಥಿ ಸುಶಾಂತ್ ಸುಜೀರ್ ಕುಮಾರ್ ರವರಿಗೆ ನೀಡಲಾಯಿತು.
ಪರಮಪೂಜ್ಯ ಶ್ರೀಗಳು ಆಶೀರ್ವಚನ ನೀಡಿ ವೇದಿಕೆಯಲ್ಲಿ ಆಸೀನರಾಗಿರುವ ಪ್ರತಿಯೋರ್ವ ಮುಖ್ಯ ಅತಿಥಿಗಳು ವಿದ್ಯಾಪೀಠಕ್ಕೆ ಹಾಗೂ ಆಶ್ರಮಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಹಾಗೂ ಅವರ ಸಾಧನೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ನೀಡಿದ ಪ್ರಶಸ್ತಿಗಳ ಮಹತ್ವವನ್ನು ತಿಳಿಸಿದರಲ್ಲದೆ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತವಾದ ಶಿಕ್ಷಣ ನೀಡಿ ನೂತನ ಪೀಳಿಗೆಯನ್ನು ತಯಾರು ಮಾಡುವುದರ ಮೂಲಕ ಸುಂದರ ಭಾರತವನ್ನು ಕಟ್ಟುವಲ್ಲಿ ಶ್ರಮಿಸೋಣ ಎಂದು ಹರಸಿದರು. ಪ್ರಾಂಶುಪಾಲೆ ರೇಖಾ ಪ್ರದೀಪ್ ಸ್ವಾಗತಿಸಿ, ಸಹಪ್ರಾಂಶುಪಾಲೆ ಮಲ್ಲಿಕಾ ವಂದಿಸಿದರು.ಸ್ವಾತಿ ಮಾತಾಶ್ರೀ ಮತ್ತು ಸೌಮ್ಯ ಮಾತಾಶ್ರೀ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಬೆಳಿಗ್ಗೆ 9.30 ಕ್ಕೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ದ್ವಜಾರೋಹಣಗೈದರು. ಬಳಿಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟಿಗಳಾದ ಮೋಹನ್ ದಾಸ್ ಕೊಂಡೆವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದಿನದ ಮಹತ್ವವನ್ನು ತಿಳಿಸಿ ಶುಭಹಾರೈಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಶಿಶುವಾಟಿಕಾ ಮಾತೃಸಮಿತಿಯ ಅಧ್ಯಕ್ಷೆ ಮಾಲತಿ ದೇವಿ ಶುಭ ಹಾರೈಸಿದರು. ಚೈತನ್ಯ ಮಾತಾಶ್ರೀ ಸ್ವಾಗತಿಸಿ, ಸುಮ ಮಾತಾಶ್ರೀ ವಂದಿಸಿದರು. ಅಮಿತ ಮಾತಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.




.png)
.png)
