ಬದಿಯಡ್ಕ: ಕೇರಳ ಸ್ಟೇಟ್ ರೂಟ್ರೋನಿಕ್ಸ್ ನಡೆಸುವ ಬೇಸಿಗೆಕಾಲ ಕಂಪ್ಯೂಟ್ ತರಬೇತಿಯ ಪ್ರವೇಶವನ್ನು ಏಪ್ರಿಲ್ 20ರವರೆಗೆ ವಿಸ್ತರಿಸಲಾಗಿದೆ. ಈ ಕೋರ್ಸ್‍ಗಳು ಅಧಿಕೃತ ಸಂಸ್ಥೆಯಾದ ಪರಂ ಕಂಪ್ಯೂಟರ್ ಇನ್ಸ್‍ಟಿಟ್ಯೂಷನ್ ಬದಿಯಡ್ಕ ಇದರಲ್ಲಿ ಡೇಟಾ ಎಂಟ್ರಿ, ಅಕೌಂಟಿಂಗ್ ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಎಂ ಎಸ್ ಆಫೀಸ್, ಮೊದಲಾದ 30ಕ್ಕೂ ಹೆಚ್ಚು ವೃತ್ತಿಪರ ಕಂಪ್ಯೂಟರ್ ತರಬೇತಿ ನೀಡಲಾಗುವುದು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕಾಗಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





