ಕಾಸರಗೋಡು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ನಡುವೆ, ಕೇರಳ ಪೆÇಲೀಸರ ಮಹಿಳಾ ಅಧಿಕಾರಿಗಳ ತಂಡವೊಂದು ಮಹಿಳೆಯರ ಮೇಳಿನ ಅತಿಕ್ರಮಣ ತಡೆಗಟ್ಟಿ ಆತ್ಮರಕ್ಷಣೆಯ ಬಗ್ಗೆ ಬೋಧನೆ ನೀಡುವ ಕಾರ್ಯಕ್ರಮ ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ವೇದಿಕೆಯಲ್ಲಿ ಸಜ್ಜುಗೊಳಿಸಲಾಯಿತು.
ಕಡಿಮೆ ಕಾಲವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಆತ್ಮರಕ್ಷಣೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಗಿತ್ತು. ದಾಳಿ ನಡೆಯುವ ಸಂದರ್ಭ ಇದನ್ನು ಸಮರ್ಥವಾಗಿ ಹಾಗೂ ತಂತ್ರಪೂರ್ವಕವಾಗಿ ಎದುರಿಸುವ ವಿದ್ಯೆಯನ್ನೂ ಕಲಿಸಿಕೊಡಲಾಯಿತು. ತಾವು ಮಹಿಳೆಯರು ಅಥವಾ ಮಕ್ಕಳು ಎಂದು ಹಿಂದೇಟುಹಾಕುವ ಬದಲು ಅತಿಯಾದ ಆತ್ಮವಿಶ್ವಾಸದೊಂದಿಗೆ ತಮ್ಮ ಆತ್ಮರಕ್ಷಣೆಗಾಗಿ ದಾಳಿಕೋರನ ವಿರುದ್ಧ ಹೋರಾಡುವ ತಂತ್ರಗಳನ್ನು ಕಲಿಸಿಕೊಡಲಾಯಿತು.
ಮಹಿಳೆಯರು ಯಾವತ್ತೂ ಪುರುಷರಿಗಿಂತ ದೈಹಿಕವಾಗಿ ದುರ್ಬಲರು ಎಂಬ ಸಾಮಾನ್ಯ ಗ್ರಹಿಕೆಯನ್ನು ಸಮಾಜವು ಹೊಂದಿದೆ. ಅದು ತಪ್ಪು ಗ್ರಹಿಕೆ ಮತ್ತು ನಾವು ಮಹಿಳೆಯರು ಎಂಬ ಕಾರಣಕ್ಕಾಗಿ ನಮ್ಮ ವಿರುದ್ಧ ತಾರತಮ್ಯ ಮಾಡಬಾರದು. ಜತೆಗೆ ಮಹಿಳಾ ಅಧಿಕಾರಿಗಳೂ ಸಹ ಹಿಂಸೆಯನ್ನು ಸಹಿಸಿಕುಳಿತುಕೊಳ್ಳಬಾರದು ಎಂಬುದಾಗಿ ತಿಳಿಸಿಕೊಡಲಾಯಿತು.
ನಮ್ಮ ಆತ್ಮರಕ್ಷಣೆಗಾಗಿ ಮಾತ್ರ ಕಲಿತುಕೊಳ್ಳುವ ಈ ವಿದ್ಯೆ, ಮತ್ತೊಬ್ಬರ ಮೇಲೆ ಆಕ್ರಮಣ ಮಾಡುವ ಸಂದರ್ಭದಲ್ಲೂ ಪ್ರಯೋಗಿಸಲು ಸಮರ್ಥರಾಗಬೇಕು. ಆತ್ಮರಕ್ಷಣೆಯೊಂದಿಗೆ ಸಮಾಜದ ರಕ್ಷಣೆಯೂ ಈ ಮೂಲಕ ಸಾಧ್ಯವಾಗಬೇಕು. ಇದು ಯೋಜನೆಯ ಉದ್ದೇಶವೂ ಅಗಿದೆ ಎಂದು ತರಬೇತಿ ಅಧಿಕಾರಿ ತಿಳಿಸಿದರು.±
ಶಾಲೆಯಿಂದ ಅರ್ಧಕ್ಕೆ ಅಧ್ಯಯನ ಮೊಟಕುಗೊಳಿಸಿ ಹೊರಗುಳಿಯುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವ ಹೋಪ್ ಯೋಜನೆ, ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡುವ ಚಿರಿ ಯೋಜನೆ, ಮಹಿಳೆಯರಿಗೆ ಆನ್‍ಲೈನ್ ಸಮಾಲೋಚನೆ, ಸೈಬರ್ ಪ್ರಕರಣಗಳು ಮತ್ತು ಪೆÇೀಕ್ಸೋ ಕಾಯ್ದೆಯನ್ನು ಒದಗಿಸುವ ಅಪರಾಜಿತ ಯೋಜನೆಗಳ ಬಗ್ಗೆ ಮಾಹಿತಿಯನ್ನೂ ನೀಡಲಯಿತು.






