ನವದೆಹಲಿ/ಮುಜಾಪ್ಫರ್‌ನಗರ: 'ವಕ್ಫ್ ಮಂಡಳಿಯನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಸರ್ಕಾರ ಬಯಸುತ್ತಿಲ್ಲ. ಆದರೆ, ಕಾನೂನು ಪ್ರಕಾರ ಮಂಡಳಿ ಕೆಲಸ ಮಾಡಲಿ ಎನ್ನುವುದನ್ನು ಬಯಸುತ್ತೇವೆ. ಮಂಡಳಿಯ ಆಸ್ತಿಗಳನ್ನು ಮುಸ್ಲಿಂ ಸಮುದಾಯದ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಬಳಸಿಕೊಳ್ಳಲಾಗುವುದು' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಬಿಜೆಪಿಯ 46ನೇ ಸಂಸ್ಥಾಪನಾ ದಿನದ ಪ್ರಯುಕ್ತ ಪಕ್ಷದ ಕೇಂದ್ರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಟರ್ಕಿ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳು ವಕ್ಫ್ ಆಸ್ತಿಗಳನ್ನು ನಮ್ಮ ನಿಯಂತ್ರಣಕ್ಕೆ ತಂದುಕೊಂಡಿವೆ. ವಕ್ಫ್ ಮಂಡಳಿಯನ್ನು ನಿರ್ವಹಿಸುತ್ತಿರುವವರಲ್ಲಿ ನಾವು ಕೇಳುತ್ತಿರುವುದು ಕಾನೂನು ಪ್ರಕಾರ ಕೆಲಸ ಮಾಡಿ ಎಂದಷ್ಟೇ' ಎಂದರು.
'ಸುಪ್ರೀಂ'ನಲ್ಲಿ ಅರ್ಜಿ: ಕೇರಳದ ಸುನ್ನಿ ಮುಸ್ಲಿಂ ಪಂಡಿತರು ಮತ್ತು ಧರ್ಮಗುರುಗಳನ್ನು ಒಳಗೊಂಡ 'ಸಮಸ್ತ ಕೇರಳ ಜಮೀಯತುಲ್ ಉಲೆಮಾ' ಸಂಸ್ಥೆಯು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. 'ಸಂವಿಧಾನದ ಒಕ್ಕೂಟ ತತ್ವಗಳಿಗೆ ಈ ಕಾಯ್ದೆಯು ವಿರುದ್ಧವಾಗಿದೆ. ರಾಜ್ಯ ಸರ್ಕಾರಗಳು ಹಾಗೂ ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರಗಳನ್ನು ಈ ಕಾಯ್ದೆ ಕಸಿದುಕೊಳ್ಳುತ್ತದೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಪಕ್ಷವನ್ನು ವಿಸ್ತರಿಸುವುದು ಮತ್ತು ಚುನಾವಣೆಗಳನ್ನು ಗೆಲ್ಲುವುದು ಒಂದು ಕಲೆ. ಜೊತೆ ಜೊತೆಗೆ ಅದು ವಿಜ್ಞಾನವೂ ಹೌದು. ಇದರಿಂದಲೇ ಪಕ್ಷವು 'ವೈಜ್ಞಾನಿಕ'ವಾಗಿ ಬೆಳೆದುಕೊಂಡು ಬಂದಿದೆವಿರೋಧ: 300 ಮುಸ್ಲಿಮರಿಗೆ ನೋಟಿಸ್
ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಉತ್ತರ ಪ್ರದೇಶದ ವಿವಿಧ ಮಸೀದಿಗಳಲ್ಲಿ ಮಾ.28ರಂದು ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ ಮಾಡಿದ ಒಟ್ಟು 300 ಜನರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರತಿಯೊಬ್ಬರೂ ₹2 ಲಕ್ಷ ಬಾಂಡ್ ಸಲ್ಲಿಸಬೇಕು ಎಂದೂ ಹೇಳಿದ್ದಾರೆ. ಮುಜಾಪ್ಫರ್‌ನಗರದ ಎಸ್‌ಪಿ ಸತ್ಯನಾರಾಯಣ ಪ್ರಜಾಪತಿ ಅವರು ಈ ಬಗ್ಗೆ ಮಾಹಿತಿ ನೀಡಿ 'ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಜನರನ್ನು ಗುರುತು ಮಾಡಲಾಗಿದೆ. ಇನ್ನಷ್ಟು ಮಂದಿಯನ್ನು ಗುರುತು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶನಿವಾರ ಒಂದೇ ದಿನ ಸುಮಾರು 24 ಮಂದಿಗೆ ನೋಟಿಸ್ ನೀಡಲಾಗಿದೆ' ಎಂದರು.




