ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬೋಳ್ನ ಶ್ರೀ ಬೋಳ್ನಾಡು ಮಲರಾಯ ಮಹಮ್ಮಾಯೀ ದೈವಸ್ಥಾನದಲ್ಲಿ ಬೋಳ್ನ ಮಾರಿಪೂಜೆ ಏ. 8ರಂದು ಜರುಗಲಿದೆ. ಬೆಳಗ್ಗೆ 11ಕ್ಕೆ ಕುಣಿತ ಭಜನೆ, ಮಧ್ಯಾಹ್ನ 12ಕ್ಕೆ ಮಲರಾಯ ಮಹಮ್ಮಾಯೀ ಅಮ್ಮನವರಿಗೆ ಕಲಶಾಭಿಷೇಕ ನಡೆಯುವುದು.
ಸಂಜೆ 7ಕ್ಕೆ ಭಜನೆ, ಮಲರಾಯ ಮಹಮ್ಮಾಯೀ ಬೈರವಾದಿ ದೈವಗಳಿಗೆ ವಿಶೇಷ ಪೂಜೆ ನಡೆಯುವುದು. ರಾತ್ರಿ 9.30ರಿಂದ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾರತೀಯ ದೇಸೀ ಸಾಂಸ್ಕøತಿಕ ಸಂಗಮ'ಭರತ ವರ್ಷ ವೈಭವ', ರಾತ್ರಿ 12ರಿಂದ ಮಾರಿಪೂಜೆ ನಡೆಯುವುದು.




