HEALTH TIPS

ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆ ಸಂಪನ್ನ: ಹರಿದುಬಂದ ಭಕ್ತಜನ ಸಮೂಹ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಳೆದ 12 ದಿವಸಗಳಿಂದ ನಡೆದುಬರುತ್ತಿದ್ದ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಸಮಾರೋಪ ಸಮಾರಂಭ ಸೋಮವಾರ ನಡೆಯಿತು.  ಬೆಳಗ್ಗೆ ಪಂಚವಿಂಶತಿ ಸಂಪೆÇ್ರೀಕ್ಷಣಾ ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರ್ಣಾ ಶರ್ಮಾ ಗುರುವಾಯೂರು ಅವರಿಂದ ಭಕ್ತಿಸಂಗೀತ, ವಿವಿಧ ತಂಡಗಳಿಂದ ಕುಣಿತ ಭಜನೆ, ಅಂತರಾಷ್ಟ್ರೀಯ ಖ್ಯಾತಿಯ ಕೆ.ವಿ.ರಮೇಶ್ ಅವರಿಂದ ನರಕಾಸುರ ವಧೆ ಯಕ್ಷಗಾನ ಬೊಂಬೆಯಾಟ, ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ತೆಂಕಿನ ಅಗ್ರಮಾನ್ಯ ಕಲಾವಿದರಿಂದ ಮಧುಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಮಹೋತ್ಸವದ ಕೊನೆಯ ದಿನವಾದ ಸೋಮವಾರ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.


ಜಾತ್ರೆಗೆ ಗೊನೆ ಮುಹೂರ್ತ:

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಸೋಮವಾರ ಗೊನೆ ಮುಹೂರ್ತ ನಡೆಯಿತು. ಏ. 13ರಿಂದ 17ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಏ. 14ರಂದು ವಿಷು ಕಣಿ ಉತ್ಸವ, 16ರಂದು ವಾರ್ಷಿಕ ಮಧೂರು ಬೆಡಿ ಉತ್ಸವ, 17ರಂದು ಆರಾಟು ಮಹೋತ್ಸವ ಜರುಗಲಿದೆ.

ಕ್ಲೀನ್ ಮಧೂರಿಗೆ ಸಂಕಲ್ಪ:

12 ದಿನಗಳಿಂದ ಲಕ್ಷಾಂತರ ಜನರ ಭಾಗವಹಿಸುವಿಕೆಯಿಂದ ಐತಿಹಾಸಿಕವಾಗಿ ಜರಗಿದ ದಕ್ಷಿಣದ ಕುಂಭಮೇಳವೆಂದೇ ಖ್ಯಾತಿಪಡೆದ ಮಧೂರು ಬ್ರಹ್ಮಕಲಶ- ಮೂಡಪ್ಪ ಸೇವೆಯ ಅಂಗವಾಗಿ ಮಧೂರು ಪರಿಸರದ ಪಾವಿತ್ರ್ಯ ಹಾಗೂ ಸುಸ್ಥಿರ ಆರೋಗ್ಯ ನೆಮ್ಮದಿಗಾಗಿ ಕ್ಲೀನ್ ಮಧೂರು ಯೋಜನೆಗೆ ಸೋಮವಾರ ಚಾಲನೆ ನೀಡಲಾಗಿದೆ. ಉತ್ಸವ ನಡೆದ ದೇವಳ ಪರಿಸರದ ಬಯಲು ಗದ್ಧೆಗಳು, ದೇವಾಲಯ ಅಂಗಣ, ಪೇಟೆ, ಮಧುವಾಹಿನಿ ನದಿ ಪರಿಸರ, ಉಳಿಯತ್ತಡ್ಕ ಮೊದಲಾದೆಡೆ ಸಮಯೋಚಿತ ಶುಚೀಕರಣ ಕ್ರಮಗಳು, ಶೃಂಗಾರ ಸಾಮಗ್ರಿಗಳ ವಿಲೇವಾರಿ,  ಬ್ಯಾನರ್, ಫಲಕಗಳ ಸ್ಥಳಾಂತರಕ್ಕೆ ಕ್ರಮ ಕ್ಯೆಗೊಂಡಿರುವುದಾಗಿ ವಿವಿಧ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ. 


: ಮಧೂರು ದೇವಾಲಯದಲ್ಲಿ ಸೋಮವಾರ ಶುದ್ದಿಕಲಶ ನೆರವೇರಿತು.

: ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಸಮಾರೋಪ ಸಮಾರಂಭದ ಅಂಗವಾಗಿ ಸೋಮವಾರ ಭಾರೀ ಸಂಕ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries