ಕುಂಬಳೆ : ಕುಂಬಳೆ ರಾಮನಗರ ನಿವಾಸಿ, ಹಿರಿಯ ವ್ಯಾಪಾರಿ 'ಹುಡಿ ಭಟ್ರು'ಎಂದೇ ಪರಿಚಿತರಾಗಿದ್ದ ದೇವದಾಸ್ ಭಟ್(84) ನಿಧನರಾದರು. ಜಿ.ಎಸ್.ಬಿ.ಸಮಾಜದ ಹಿರಿಯರಾಗಿದ್ದ ಇವರು, ಆರೆಸ್ಸೆಸ್‍ನ ಹಿರಿಯ ಸ್ವಯಂಸೇವಕ, ಧಾರ್ಮಿಕ ಮುಂದಾಳು, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವ ಸಮಿತಿ ಮಾಜಿ ಅಧ್ಯಕ್ಷ, ಶ್ರೀ ವೀರ ವಿಠಲ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿದ್ದರು. ತುರ್ತು ಪರಿಸ್ಥಿತಿ ವಿರುದ್ದ ಹೋರಾಡಿ ಜೈಲು ವಾಸ ಅನುಭವಿಸಿದ್ದರು. ಅವರು ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.





