HEALTH TIPS

ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿಯಲ್ಲಿ ಅಗ್ನಿ ಅವಘಡ!

ನವದೆಹಲಿ: ಮುಂಬೈನ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೆಲವು ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟುಹೋಗಿವೆ. ಆದರೆ ಕಡತಗಳ ಡಿಜಿಟಲ್‌ ಸಂಗ್ರಹವೂ ಇರುವುದರಿಂದ ಪ್ರಕರಣಗಳ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸ್ಪಷ್ಟಪಡಿಸಿದೆ.

ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದ ಕೈಸರ್‌ 1- ಹಿಂದ್‌ ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಇ.ಡಿ ಕಚೇರಿಯಲ್ಲಿ ಭಾನುವಾರ ಮುಂಜಾನೆ 2.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇದಕ್ಕೆ ಶಾರ್ಟ್‌ ಸರ್ಕೀಟ್‌ ಕಾರಣ ಎಂದು ತಿಳಿದುಬಂದಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ಕಟ್ಟಡದ ನೆಲಮಹಡಿ ಮತ್ತು ಮೊದಲ ಮಹಡಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಅಗ್ನಿ ಅವಘಡಕ್ಕೆ ತುತ್ತಾದ ಕಚೇರಿಯನ್ನು ಜನ್ಮಭೂಮಿ ಚೇಂಬರ್ಸ್‌ನಲ್ಲಿರುವ ಹಳೆಯ ಪ್ರಾದೇಶಿಕ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಅಗ್ನಿ ಅವಘಡ: ರಾಜಕೀಯ ವಾಕ್ಸಮರ

ಇ.ಡಿ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಒಂದೇ ಒಂದು ಕಾಗದಪತ್ರವೂ ಸುಟ್ಟುಹೋಗಿಲ್ಲ ಎಂದು ಹೇಳಿದ್ದಾರೆ. ಅಗ್ನಿ ಅವಘಡದಿಂದ ಯಾವುದೇ ಪ್ರಕರಣದ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಎನ್‌ಸಿಪಿ (ಶರದ್‌ ಬಣ) ಸಂಸದೆ ಸುಪ್ರಿಯಾ ಸುಳೆ ಅವರು ಬೆಂಕಿ ನಂದಿಸಲು ವಿಳಂಬ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಷ್ಟು ಮುಖ್ಯವಾದ ಕಚೇರಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಲಿಲ್ಲವೇ? ಜಗತ್ತೇ ಡಿಜಿಟಲ್‌ಮಯವಾಗಿದೆ. ಅಂಥದ್ದರಲ್ಲಿ ಕಡತಗಳ ಬ್ಯಾಕ್‌ಅಪ್‌ ಸಾಧ್ಯವಾಗದಿದ್ದರೆ ಅದು ಆಘಾತಕಾರಿ ಎಂದು ಹೇಳಿದ್ದಾರೆ. ಇ.ಡಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ಗಂಭೀರ ವಿಚಾರ. ಅದು ಹೆಚ್ಚು ಜನಸಂದಣಿ ಇರದ ಪ್ರದೇಶ. ಅವಘಡ ಸಂಭವಿಸಿದ ನಂತರ ಎಷ್ಟು ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದರು ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಹರ್ಷವರ್ಧನ್‌ ಸಪಕಾಲ್‌ ಅವರು ಇ.ಡಿಯು ತನ್ನದೇ ಕಚೇರಿಯಲ್ಲಿ ಕಡತಗಳನ್ನು ಸುಟ್ಟು ಹಾಕಿದೆ. ರಾಜಕೀಯ ಲಾಭಕ್ಕಾಗಿ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗ್ನಿ ಅವಘಡದ ನಂತರ ಕೆಲವು ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries