ಮಧೂರು : ಆರಾಧನಾಲಯಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಪ್ರತಿಯೊಬ್ಬರಿಗೆ ಲಭಿಸುವಂತಾದಾಗ ಸನಾತನ ಧರ್ಮ ಮತ್ತಷ್ಟು ಸದೃಢಗೊಳ್ಳಲು ಸಾಧ್ಯ ಎಂಬುದಾಗಿ ಕೊಲ್ಲಂ ಅಮೃತಾನಂದಮಯೀ ಮಠದ ಶ್ರೀಅಮೃತಕೃಪಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯ ಅಂಗವಾಗಿ ಗುರುವಾರ ಪ್ರಧಾನ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿಶ್ವಾದ್ಯಂತ ಇಂದು ತಮ್ಮ ಮತಗಳನ್ನು ಉಪೇಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಸನಾತನ ಧರ್ಮದಲ್ಲಿ ಇಂತಹ ಸವಾಲು ಕಡಿಮೆಯಿದ್ದು, ದೇವಾಲಯಗಳ ಪುನರುಜ್ಜೀವನಗೊಳ್ಳುತ್ತಿರುವುದು ಭರವಸೆ ಮೂಡಿಸಿದೆ. ಹಿಂದೂ ಸಮಾಜದ ಪುರೋಗತಿಯಲ್ಲಿ ಯುವ ಸಂಘಟನೆಗಳ ಪಾತ್ರವೂ ಮಹತ್ತರವಾದುದು. ಇಂದು ದೇವಾಲಯಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ನೇತಾರರಲ್ಲಿ ಕೆಲವರಿಗೆ ದೈವ ವಿಶ್ವಾಸವಿಲ್ಲದವರೂ ಕ್ಷೇತ್ರದ ಆಡಳಿತದಲ್ಲಿ ಕೈಯಾಡಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಜಾಗ್ರತೆ ವಹಿಸಬೇಕಿದ್ದು ದೈವ ವಿಶ್ವಾಸಿಗಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗ ಬೇಕು. ನಮ್ಮ ಪವಿತ್ರ ಗ್ರಂಥಗಳ ಬಗ್ಗೆ ನಮಗೆಲ್ಲರಿಗೂ ಅರಿವಿರಬೇಕು. ಗ್ರಂಥಗಳ ವಿಚಾರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ನಿಟ್ಟಿನಲ್ಲಿ ಮೂಲಗ್ರಂಥಗಳ ಅಧ್ಯಯನ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.
ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್‍ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ಹಲವು ಪ್ರಾಚೀನ ಸಂಸ್ಕøತಿಗಳು ನಾಶವಾಗಿವೆ. ಸನಾತನ ಧರ್ಮದ ಸತ್‍ಚಿಂತನೆಯ ಫಲವಾಗಿ ಭಾರತೀಯ ಸನಾತನ ಸಂಸ್ಕೃತಿ-ಧರ್ಮ ಅವಿನಾಶಿಯಾಗಿ ಮುಂದುವರಿದಿದೆ. ಸನಾತನ ಧರ್ಮ ಯಾರಮೇಲೂಸವಾರಿ ಮಾಡಿಲ್ಲ. ಈ ಕಾರಣದಿಂದಪೂರ್ವದೇಶಗಳಲ್ಲೂಈಬಗ್ಗೆಗೌರವಾಧಾರಗಳಿದ್ದು, ಸನಾತನ ಧರ್ಮದ ಸತ್‍ಚಿಂತನೆಗಳು ಜಾಗತಿಕವಾಗಿ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದರು. ಪಾಡಿ ಅರಮನೆಯ ಹರಿಪ್ರಸಾದ್ ದಿವ್ಯ ಉಪಸ್ಥಿತರಿದ್ದರು. ಕನ್ನಡ ಚಲಚಿತ್ರನಟಿ ಆಶಾ ಭಟ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಕಾಸರಗೋಡು ಕೋಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ, ವಕೀಲ ಕರುಣಾಕರನ್‍ನಂಬ್ಯಾರ್ ಪ್ರಧಾನಭಾಷಣ ಮಾಡಿದರು. ಮತಸಹಿಷ್ಣುತೆಯ ಸಂದೇಶ ಸಾರಿದ ಭಾರತ ಇತರ ಮತಗಳನ್ನೂ ಗೌರವಿಸುತ್ತದೆ. ಈ ಪರಂಪರೆಯನ್ನು ಜಾಗರೂಕತೆಯಿಂದ ಮುಂದುವರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಕಷ್ಟ ಸಂದರ್ಭದಲ್ಲಿ ಮಾತ್ರ ನಮ್ಮಲ್ಲಿ ದೈವಚಿಂತನೆ ಜಾಗೃತಿಯಾದರೆ ಸಾಲದು. ನಿತ್ಯ ಪ್ರತಿಕರ್ಮವೂ ಭಗವದನುಗ್ರಹವೆಂಬ ಅರಿವು ನಮ್ಮಲ್ಲಿರಲಿ ಎಂದು ತಿಳಿಸಿದರು.
ನಾರಂಪಾಡಿ ಶ್ರೀಕ್ಷೇತ್ರದ ಪವಿತ್ರಪಾಣಿ ಡಾ.ಕಿಶೋರ್ ಕುಮಾರ್ ಕುಣಿಕುಳ್ಳಾಯ, ಮಧೂರು ಗ್ರಾ,ಪಂ.ಸದಸ್ಯ ರತೀಶ್ ಕೆ., ವಕೀಲ ಅನಂತರಾಮ, ಕೇರಳ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಸಂಶೋಧನಾ ಸಹಾಯಕ ಡಾ.ಜಯಪ್ರಕಾಶ ನಾಯ್ಕ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಶ್ರೀಕೃಷ್ಣ ಕಾರಂತ ಬನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ಯಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗಟ್ಟಿ ಮನ್ನಿಪ್ಪಾಡಿ ವಂದಿಸಿದರು.





