HEALTH TIPS

ಮಧೂರು: ಭಕ್ತರ ಶ್ಲಾಘನೆಗೆ ಕಾರಣವಾದ ಉಚಿತ ಅಟೋ ಸೇವೆ

ಮಧೂರು: ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಮಧೂರು ಶ್ರೀಮಹಾಗಣಪತಿ ಶ್ರೀಸನ್ನಿಧಿಗೆ ಕರ್ನಾಟಕ-ಕೇರಳ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಗವದ್ಬಕ್ತರು ಆಗಮಿಸುತ್ತಿದ್ದಾರೆ. ದೇವಾಲಯ ವಠಾರದಲ್ಲಿ ಜನದಟ್ಟಣೆ ನಿಯಂತ್ರಿಸಲು ಸ್ವಯಂಸೇವಕರು ಹರಸಾÀಹಸ ಪಡುವಂತಾಗಿದೆ. ಕಾಸರಗೋಡಿಂದ ಆಗಮಿಸುವ ಬಸ್‍ಗಳಿಗೆ ಉಳಿಯತ್ತಡ್ಕದ ಪರಕ್ಕಿಲ ವರೆಗೆ ಮಾತ್ರ ಸಂಚರಿಸಲು ಅನುಮತಿಯಿದ್ದು ಅಲ್ಲಿಂದ ಭಕ್ತಾದಿಗಳು ಕಾಲ್ನಡೆಯಾಗಿ ಅಥವಾ ವಿವಿಧ ಅಟೋಗಳ ಮೂಲಕ ಆಗಮಿಸುತ್ತಿದ್ದಾರೆ.

ಈ ಮಧ್ಯೆ ಬುಧವಾರದಿಂದ ಮಧೂರು-ಉಳಿಯತ್ತಡ್ಕ, ಉಳಿಯತ್ತಡ್ಕ-ಮಧೂರಿಗೆ ಇಲ್ಲಿಯ ಅಟೋ ಚಾಲಕರು ಉಚಿತ ಸೇವೆ ನೀಡುತ್ತಿದ್ದು, ಜನರಿಂದ ಮುಕ್ತ ಶ್ಲಾಘನೆಗೆ ಕಾರಣವಾಗಿದೆ. ಇಲ್ಲಿಯ ಅಟೋ ಚಾಲಕರು ನಡೆಸುತ್ತಿರುವ ನಿರಂತರ ಉಚಿತ ಸೇವೆ ಪಾಳಿಯರೂಪದಲ್ಲಿ ಐದೈದು ಅಟೋರಿಕ್ಷಗಳು ದಿನಬದಲಿಸಿ ದಿನ ಸೇವೆ ನೀಡುತ್ತಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries