ಪೆರ್ಲ: ಎಣ್ಮಕಜೆ ಪಂಚಾಯಿತಿಯ ಕುರಡ್ಕದಲ್ಲಿ ಚಟುಟಿಕೆ ನಡೆಸುತ್ತಿರುವ 'ಕೆ.ಪಿ ಮದನ ಮಾಸ್ಟರ್ ಸ್ಮಾರಕ' ಗ್ರಂಥಾಲಯದಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಓದುವ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಆದೇಶದನ್ವಯ ಗ್ರಂಥಾಲಯದಲ್ಲಿ "ವಾಚನ ಕಲರಿ " ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತ್ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಗ್ರಂಥಾಲಯದ ಜಾಯಿಂಟ್ ಸೆಕ್ರೆಟರಿ ಯೂ ಅದ ಸೌಧಾಭಿ ಹನೀಫ್ ಉದ್ಘಾಟಿಸಿದರು. ಎಣ್ಮಕಜೆ ಲೈಬ್ರರಿ ನೇತೃ ಸಮಿತಿ ಕನ್ವೀನರ್ ಸಲಾವುದೀನ್ ಅಧ್ಯಕ್ಷತೆ ವಹಿಸಿದ್ದರು .ಮುಹಮ್ಮದ್ ಹನೀಫ್ ಸ್ವಾಗತಿಸಿದರು.
ರಜಾದಿನಗಳಲ್ಲಿ ಮಕ್ಕಳಿಗೆ ಆಸಕ್ತಿಯಿರುವ ಕನ್ನಡ,ಮಲೆಯಾಳ ,ಇಂಗ್ಲಿಷ್ ಭಾಷೆ ಗಳ ಪುಸ್ತಕ ಗಳನ್ನು ಓದಿ ಟಿಪ್ಪಣಿ, ನಾಟಕ, ಕವಿತೆರಚಿಸುವುದು, ಶಾರ್ಟ್ ಫಿಲ್ಮ್ ತಯಾರಿ
ಮುಂತಾದ ಚಟುವಟಿಕೆಗಳನ್ನು ನಡೆಸುವ ಮೂಲಕ ರಜಾದಿನಗಳಲ್ಲಿ ಕಲಿಕೆಯ ಪೂರ್ವ ತಯಾರಿ ನಡೆಸುವ ನಿಟ್ಟಿನಲ್ಲಿಕರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಂಥಾಲಯದ ವತಿಯಿಂದ ಮಕ್ಕಳಿಗೆ ಬಹುಮಾನ ನೀಡಲಾಯಿತು. .ಅಂತರಾಷ್ಟ್ರೀಯ ಮಕ್ಕಳ ಓದುವ ದಿನದ ಹಿನ್ನೆಲೆಯಲ್ಲಿ ಬುಧವಾರ ಆರಂಭಗೊಂಡ ಈ ಕಾರ್ಯಕ್ರಮ ಮೇ 2 ರ ವರೆಗೆ ಮುಂದುವರಿಯಲಿದೆ.





