HEALTH TIPS

ಏ. 7: ಮಧೂರಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನ ಸಂಯೋಜನೆಯಲ್ಲಿ“ ಶ್ರೀ ಮಧುಪುರ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಪ್ರದರ್ಶನ

ಮಧೂರು:  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲೋಶೋತ್ಸವ ಮೂಡಪ್ಪ ಸೇವೆಯ ಸಮಾರೋಪದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನದ ಸಂಯೋಜನೆಯಲ್ಲಿ,  ಭಾಗವತ ಸಿರಿಬಾಗಿಲು ರಾಮಕೃಷ್ಣ  ಮಯ್ಯ ರವರ ನೇತೃತ್ವದಲ್ಲಿದಲ್ಲಿ, ಶ್ರೀ ರಾಂ ಎಲ್ಲಂಗಳ ವಿರಚಿತ “ಶ್ರೀ ಮಧುಪುರ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಪ್ರದರ್ಶನವು ಏ. 7 ರಂದು ಸೋಮವಾರ ಮಧ್ಯಾಹ್ನ 2-30 ರಿಂದ ಬ್ರಹ್ಮಕಲೋಶೋತ್ಸವದ ಪಾರ್ತಿಸುಬ್ಬ ಸಭಾಂಗಣದಲ್ಲಿ ನಡೆಯಲಿದೆ. ಹಲವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಮೂಲಕ ಹಾಗು ಗಡಿನಾಡು ಕಾಸರಗೋಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರ ಹೆಸರಿನಲ್ಲಿ ಬೃಹತ್ ಸಾಂಸ್ಕೃತಿಕ ಭವನ ರಚಿಸಿ ಹಲವು ಚಟುವಟಿಕೆಗಳಗೆ ಪ್ರಧಾನವೆನಿಸಿದ ಪ್ರತಿμÁ್ಠನದ ಈ ಕಾರ್ಯಕ್ರಮವು ಬ್ರಹ್ಮಕಲೋಶೋತ್ಸವದ ಶುಭ ಸಂದರ್ಭಕ್ಕೆ ಸೂಕ್ತವೆನಿಸಿದೆ. ಯಕ್ಷಗಾನ ಕ್ಷೇತ್ರದ ಹಲವಾರು ಹಿರಿಯ, ಕಿರಿಯ ಕಲಾವಿದರು ಭಾಗವಹಿಸಿದ್ದಾರೆ. ಉಜಿರೆ ಅಶೋಕ ಭಟ್, ವಾಸುದೇವ ರಂಗ ಭಟ್ ಮಧೂರು, ರಾಧಾಕೃಷ್ಣ ನಾವಡ ಮಧೂರು, ಅಂಬಾಪ್ರಸಾದ್ ಪಾತಾಳ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಲಕ್ಷ್ಮಣ ಕುಮಾರ್ ಮರಕಡ, ಮಣಿಪಾಲದ ಪ್ರಸಿದ್ಧ ವೈದ್ಯ ಡಾ. ಸುನೀಲ್ ಮುಂಡ್ಕೂರು, ವೈಕುಂಠ ಹೇರ್ಳೆ ಸಾಸ್ತಾನ, ಡಾ. ಶ್ರುತಕೀರ್ತಿ ರಾಜ್ ಉಜಿರೆ,ಮಾಧವ ಪಾಟಾಳಿ ನೀರ್ಚಾಲು, ಪ್ರಕಾಶ್ ನಾಯಕ್ ನೀರ್ಚಾಲು, ಸಿರಿಬಾಗಿಲು ಪ್ರತಿμÁ್ಠನದ ವಿದ್ಯಾರ್ಥಿಗಳು ಮತ್ತು ಹಲವು ಕಲಾವಿದರು ಭಾಗವಹಿಸಲಿದ್ದಾರೆ. ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ಸಿರಿಬಾಗಿಲು ಪ್ರತಿμÁ್ಠನದ ಅಧ್ಯಕ್ಷ ರಾಮಕೃಷ್ಣ  ಮಯ್ಯ, ಮಹೇಶ ಕನ್ಯಾಡಿ ಭಾಗವತರಾಗಿ, ಗೋಪಾಲ ಕೃಷ್ಣ  ನಾವಡ ಮಧೂರು,  ರಾಮಮೂರ್ತಿ ಕುದ್ರೆಕ್ಕೂಡ್ಲು, ಉದಯ ಕಂಬಾರು, ವಿಕ್ರಂ ಮಯ್ಯ ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಗಣೇಶ ಕಲಾ ವೃಂದ ಪೈವಳಿಕೆ ಇವರು ವೇಷ ಭೂಷಣ ಒದಗಿಸಲಿದ್ದಾರೆ.  

ಮಧುಪುರ ಕ್ಷೇತ್ರ ಮಹಾತ್ಮೆಯ ಪ್ರಧಾನ ಕಥಾ ವಸ್ತು – “ಪರಶುರಾಮ ಸೃಷ್ಟಿ, ಧರ್ಮಪಾಲ ಮಹಾರಾಜನ ಅಶ್ವಮೇಧ ಯಾಗ, ವಿಘ್ನೇಶನ ಅನುಗ್ರಹ, ಮದರುವಿನಿಂದಾಗಿ ಮದನಂತೇಶ್ವರ ಲಿಂಗ ಸಿಗುವುದು, ಅರಸನಿಂದ ಕ್ಷೇತ್ರ ನಿರ್ಮಾಣ, ಮದನಂತೇಶ್ವರ ಸಿದ್ಧಿವಿನಾಯಕ ದೇವರ ಆರಾಧಕ ಕುಂಬಳೆ ಸೀಮೆಯ ಅರಸ ಜಯಸಿಂಹನ ಆಳ್ವಿಕೆ, ಟಿಪ್ಪು ಸುಲ್ತಾನ್ ಕುಂಬಳೆ ಸೀಮೆಯ ದಾಳಿ, ಮದನಂತೇಶ್ವರ  ಸನ್ನಿಧಿಯಲ್ಲಿ ಮನ ಪರಿವರ್ತನೆ" ಮೊದಲಾದ ಭಾಗಗಳು ಸೇರಿವೆ.

ಈ ಹಿಂದೆ ಸಿರಿಬಾಗಿಲು ಪ್ರತಿμÁ್ಠನದಲ್ಲಿ ವಿದ್ವಾನ್ ಡಿ. ವಿ. ಹೊಳ್ಳ ರವರ ಕೃತಿಯ ಮಧುಪುರ ಮಹಾತ್ಮೆ ಪ್ರದರ್ಶನಗೊಂಡು ಜನ ಮೆಚ್ಚುಗೆಗಳಿಸಿತ್ತು. ಬ್ರಹ್ಮಕಲೋಶೋತ್ಸವ ಸಂದರ್ಭಗಳಲ್ಲಿ ಮತ್ತೆ ಈ ಪ್ರದರ್ಶನ ಕುಂಬಳೆ ಸೀಮೆಯ ಇತಿಹಾಸ ವನ್ನು ಮತ್ತೆ ನೆನಪಿಸಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries