ನವದೆಹಲಿ: 'ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮತದಾರರ ಸಂಖ್ಯೆ ಅಧಿಕಗೊಂಡಿತ್ತು' ಎಂಬುದಾಗಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿಹಾಕಿದೆ.
'ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುವುದು ಕಾನೂನನ್ನು ಅಗೌರವದಿಂದ ಕಂಡಂತಾಗುತ್ತದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳು ತಮ್ಮ ಪರವಾಗಿ ನೇಮಿಸಿಕೊಳ್ಳುವ ಏಜೆಂಟರ ಯತ್ನಕ್ಕೆ ಘಾಸಿ ಮಾಡಿದಂತಾಗುತ್ತದೆ' ಎಂದು ಆಯೋಗದ ಮೂಲಗಳು ಮಂಗಳವಾರ ಹೇಳಿವೆ.
'ಕಾನೂನಿನ ಪ್ರಕಾರವೇ ಮತದಾರರ ಪಟ್ಟಿಯನ್ನು ರೂಪಿಸಲಾಗುತ್ತದೆ. ಚುನಾವಣೆಗೂ ಮುನ್ನ ಅಥವಾ ಪ್ರತಿ ವರ್ಷವೂ ಪಕ್ಷಗಳಿಗೆ ಪರಿಷ್ಕೃತ ಪಟ್ಟಿಯನ್ನು ನೀಡಲಾಗುತ್ತದೆ. 9.72 ಕೋಟಿ ಮತದಾರರು ಇರುವ ಪಟ್ಟಿಯನ್ನು ಮಹಾರಾಷ್ಟ್ರ ಚುನಾವಣೆಗೂ ಮೊದಲು ಬಿಡುಗಡೆ ಮಾಡಲಾಗುತ್ತು. ಕೇವಲ 89 ಆಕ್ಷೇಪಣೆಗಳಷ್ಟೇ ಬಂದಿದ್ದವು' ಎಂದು ಮಾಹಿತಿ ನೀಡಿವೆ.




