ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ, ಪ್ರವಾಸಿಗರ ನೆರವಾಗುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮಂಗಳವಾರ ತುರ್ತು ಸಹಾಯವಾಣಿ ಆರಂಭಿಸಿದೆ.
'ಇಲ್ಲಿನ ಅನಂತನಾಗ್ ಜಿಲ್ಲೆಯಲ್ಲಿ 24*7 ತುರ್ತು ಸಹಾಯ ಕೇಂದ್ರ ಆರಂಭಿಸಿದ್ದು, ಯಾವುದೇ ಮಾಹಿತಿ, ಅಗತ್ಯ ನೆರವು ಬೇಕಿದ್ದರೂ ಸಂಪರ್ಕಿಸಬಹುದು' ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಶ್ರೀನಗರದಲ್ಲಿಯೂ ತುರ್ತು ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.




