ಕಾಸರಗೋಡು: ಕೇರಳ ಸರ್ಕಾರದ ವಿಜ್ಞಾನ ಕೇರಳ ಯೋಜನೆಯನ್ವಯ ಕೌಶಲ್ಯ ತರಬೇತಿ ಕಾಸರಗೋಡಿನ ಜೈನಬ್ ಬಿ.ಎಡ್ ಕಾಲೇಜಿನಲ್ಲಿ ಪ್ರಾರಂಭವಾಗಿದೆ. ವಿಜ್ಞಾನ ಕೇರಳಂ ಯೋಜನೆಯ ಭಾಗವಾಗಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಿತ್ರ (ಮೆಂಟರ್ ಇನಿಶಿಯೇಟೆಡ್ ಟ್ರೈನಿಂಗ್ ಫಾರ್ ರಿಕ್ರೂಟ್‍ಮೆಂಟ್) ಶಿಬಿರವು 25,000 ವಿದ್ಯಾರ್ಥಿಗಳಿಗೆ ಪೈಲಟ್ ಕೌಶಲ್ಯ ತರಬೇತಿ ಕಾರ್ಯಕ್ರಮದ ಮೂಲಕ ತರಬೇತಿ ನೀಡುವ ಗುರಿಯನ್ನು ಹೊಂದಿದೆ ಮತ್ತು ಈ ಮೂಲಕ ಅವರನ್ನು ಉದ್ಯೋಗಕ್ಕೆ ಸಿದ್ಧಪಡಿಸಲಿದೆ.
ಮಿತ್ರ ಶಿಬಿರದ ಅಂಗವಾಗಿ ಕೌಶಲ್ಯಗಳನ್ನು ಹೆಚ್ಚಿಸಲು ಕೆಲಸದ ಸಿದ್ಧತೆ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಫೌಂಡೇಶನ್ ಮಾಡ್ಯೂಲ್ ತರಬೇತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. 2025 ಮೇ ಮತ್ತು ಜೂನ್ ತಿಂಗಳುಗಳಲ್ಲಿ, ಜೈನಾಬ್ ಬಿ.ಎಡ್ ಕಾಲೇಜು ಚೆರ್ಕಳ, ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಕಾಞಂಗಾಡ್, ಕಾಲೇಜ್ ಆಫ್ ಇಂಜಿನಿಯರಿಂಗ್ ತ್ರಿಕರಿಪುರ ಚೀಮೇನಿ, ಮತ್ತು ಎಂಐಸಿ ಕಲಾ ಮತ್ತು ವಿಜ್ಞಾನ ಕಾಲೇಜು ಚಟ್ಟಂಚಲ್‍ನಲ್ಲಿ ಆರಂಭಿಸಲಾಗುವುದು. 2025 ರಲ್ಲಿ ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಗಳನ್ನು ಈ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ(8073301273)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




