ಕಾಸರಗೋಡು: ಪಾಲಕುನ್ನು ಚಂದ್ರಾಪುರಂ ಮೊಟ್ಟಮ್ಮಾಳ್ ವೆಸ್ಟ್ ಹೌಸ್ ನಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮತ್ತು ಕಲಿಯಾಟ ಮಹೋತ್ಸವ ಏ.28ರಿಂದ ಮೇ 2ರ ವರೆಗೆ ನಡೆಯಲಿದೆ. 28 ರಂದು ಬೆಳಿಗ್ಗೆ 10ಕ್ಕೆ ನೆಲ್ಲಿಯಡ್ಕ ಶ್ರೀಪುರ ಶ್ರೀ ಕಾಳಿಕಾಂಬಾದೇವಿ ದೇವಸ್ಥಾನ ವಠಾದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯುವುದು. ರಾತ್ರಿ 8ಕ್ಕೆ ಕೈಕೊಟ್ಟುಕಳಿ, 29 ರಂದು ಮಧ್ಯಾಹ್ನ 1 ಗಂಟೆಗೆ ಚಂದ್ರಾಪುರಂ ಅಯ್ಯಪ್ಪ ಭಜನಾ ಮಂದಿರ ವಠಾರದಿಂದ ತಂತ್ರಿವರ್ಯರಿಗೆ ಹಾಗೂ ಪುರೋಹಿತರಿಗೆ ಪೂರ್ಣಕುಂಭ ಸ್ವಾಗತ ನಂತರ ಸಮೂಹ ಪ್ರಾರ್ಥನೆ, ಪಂಚಗವ್ಯ ಶುದ್ಧಿ, ಗುರು ಗಣಪತಿ ಪೂಜೆ, ಪುಣ್ಯಾಹಂ, ವಾಸ್ತುರಕ್ಷಘ್ನ ಹೋಮ, ನವಗ್ರಹ ಹೋಮ, ವಾಸ್ತು ಬಲಿ, ಮಂಗಳಾರತಿ, ಭಜನೆ, 30ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಾ ಹೋಮ, ಪೂರ್ಣಾಹುತಿ, ನಂತರ ನಿವೇದ್ಯ ಸಂಕಲ್ಪ, ನಿವೇದ್ಯ ಪೂಜೆ, ಭಜನೆ ನಡೆಯುವುದು.
ಮೇ 1 ರಂದು ಬೆಳಿಗ್ಗೆ 9 ಗಂಟೆಗೆ ಪಾಲಕುನ್ನು ಭಗವತಿ ದೇವಸ್ಥಾನ ಭಜನಾ ಸಮಿತಿಯಿಂದ ಭಜನೆ, ನಂತರ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. 2 ರಂದು ಬೆಳಿಗ್ಗೆ 9 ಗಂಟೆಗೆ ಪಾರ್ಥಸಾರಥಿ ದೇವಸ್ಥಾನ ಶಾರದಾಂಬಾ ಭಜನಾ ತಡದಿಂದ ಭಜನೆ, ಬೆಳಿಗ್ಗೆ 11 ಗಂಟೆಗೆ ವಿಷ್ಣುಮೂರ್ತಿಯ ನರ್ತನ ಸೇವೆ, ಸಂಜೆ 5ಕ್ಕೆ ಸಮಾರೋಪ ಸಮರಂಭ ನಡೆಯುವುದು.




