ಪೆರ್ಲ: ಮದ್ಯ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆಗಿಳಿದ ಅಬಕಾರಿ ಅಧಿಕಾರಿಗಳಿಗೆ ಚಾಕು ಬೀಸಿ ಪರಾಕ್ರಮ ತೋರಿಸಿರುವುದಲ್ಲದೆ, ಸ್ವಯಂ ಕೈಗೆ ಇರಿದು ಗಾಯಮಾಡಿಕೊಂಡ ಘಟನೆ ಪೆರ್ಲ ಸನಿಹದ ಕನ್ನಟಿಕಾನ ಎಂಬಲ್ಲಿ ನಡೆದಿದೆ. ಕನ್ನಟಿಕಾನ ನಿವಾಸಿ ಮೊಯ್ದೀನ್‍ಕುಞÂ ಪರಾಕ್ರಮ ತೋರಿಸಿ ಸ್ವಯಂ ಇರಿದುಕೊಂಡ ಆರೋಪಿ. ಈತನ ವಶದಲ್ಲಿದ್ದ 2.52ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮೊಯ್ದೀನ್‍ಕುಞÂ ಮದ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿಪಡೆದ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಸಹಾಯಕ ಅಬಕಾರಿ ಅಧಿಕಾರಿ(ಗ್ರೇಡ್)ಎಂ.ವಿ ಸುಧೀಂದ್ರನ್ ನೇತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ದಾಂಧಲೆ ನಡೆಸಿದ್ದಾನೆ. ಗಾಯಗೊಂಡ ಈತನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ ನಂತರ ಈತನ ವಿರುದ್ಧ ಕೇಸು ದಾಖಲಿಸಲಾಯಿತು. ಚಿಕಿತ್ಸೆಯಲ್ಲಿರುವ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿಲ್ಲ. ಅಬಕಾರಿ ಅದಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರೂ ಕೇಸು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.




