ನವದೆಹಲಿ: ಸಿಎಂಆರ್ಎಲ್ ಮಾಸಿಕ ಲಂಚ ಪ್ರಕರಣದಲ್ಲಿ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಸೇರಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದೆ.
ಎಸ್.ಎಫ್.ಐ.ಒ ವೀಣಾ ವಿರುದ್ಧ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧಗಳನ್ನು ಹೊರಿಸಿ ಆರೋಪಪಟ್ಟಿ ಸಿದ್ಧಪಡಿಸಿದೆ. ಯಾವುದೇ ಸೇವೆಗಳನ್ನು ಒದಗಿಸದೆ ವೀಣಾ ವಿಜಯನ್ 2.72 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ವೀಣಾ ಅವರಲ್ಲದೆ, ಶಶಿಧರನ್ ಕರ್ತಾ, ಸಿಎಂಆರ್‍ಎಲ್ ಮತ್ತು ಎಕ್ಸಾಲಾಜಿಕ್ಸ್ ಕೂಡ ಆರೋಪಿಗಳಾಗಿದ್ದಾರೆ. 182 ಕೋಟಿ ರೂ.ಗಳನ್ನು ರಾಜಕೀಯ ನಾಯಕರಿಗೆ ವರ್ಗಾಯಿಸಲಾಗಿದೆ ಎಂದು ಎಸ್.ಎಫ್.ಐ.ಒ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕಪ್ಪು ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇರಳದಲ್ಲಿ ನಡೆದ ಅತಿದೊಡ್ಡ ಭ್ರಷ್ಟಾಚಾರ ಪ್ರಕರಣ ಇದಾಗಿದೆ. ಕೋಟ್ಯಂತರ ರೂಪಾಯಿಗಳ ಭ್ರμÁ್ಟಚಾರ ಎಂದು ಬಿಜೆಪಿ ನಾಯಕ ಶಾನ್ ಜಾರ್ಜ್ ಹೇಳಿದ್ದಾರೆ. ಬೇರೆ ಯಾವುದೇ ಮುಖ್ಯಮಂತ್ರಿ ದೇಶವನ್ನು ಇಷ್ಟೊಂದು ಲೂಟಿ ಮಾಡಿಲ್ಲ ಮತ್ತು ಈ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಶಾನ್ ಜಾರ್ಜ್ ಹೇಳಿದರು.




