ಕಾಸರಗೋಡು: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸ್ಕೈ ಡೈನಿಂಗ್ ಅನ್ನು ಬೇಕಲ್ ಬೀಚ್‍ನಲ್ಲಿ ಪ್ರಾರಂಭಿಸಲಾಗಿದೆ. 142 ಅಡಿ ಎತ್ತರದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಸನದಿಂದ ಪ್ರವಾಸಿಗರು ವೀಕ್ಷಣೆಗಳನ್ನು ಆನಂದದಿಂದ ಸವಿಯಬಹುದು.
ಇದಕ್ಕಾಗಿ ವಿಶೇಷ ಕ್ರೇನ್ ಅನ್ನು ಸಹ ಸ್ಥಾಪಿಸಲಾಗಿದೆ. ಏಕಕಾಲದಲ್ಲಿ 12 ಜನರಿಗೆ ವಿಶೇಷವಾಗಿ ಸಿದ್ಧಪಡಿಸಲಾದ ಕುರ್ಚಿಗಳಲ್ಲಿ ಕುಳಿತು ವೀಕ್ಷಣೆಗಳನ್ನು ಆನಂದಿಸಬಹುದು.
ಸ್ಥಳೀಯ ಪ್ರವಾಸಿಗರು, ವಿಭಿನ್ನ ಅನುಭವಗಳನ್ನು ಬಯಸುವ ಪ್ರಯಾಣಿಕರು ಮತ್ತು ಮಂಡಳಿಯ ಸಭೆಗಳಿಗೆ ಸೌಲಭ್ಯವಾಗಿ ಕಾರ್ಪೋರೇಟ್ ಕಂಪನಿಗಳನ್ನು ಆಕರ್ಷಿಸುವ ಗುರಿಯನ್ನು ಅಧಿಕೃತರು ಇದರಿಂದ ಹೊಂದಿದ್ದಾರೆ.
ಈ ಸ್ಕೈ ಡೈನಿಂಗ್ ಸೌಲಭ್ಯವು ಹುಟ್ಟುಹಬ್ಬಗಳನ್ನು ಆಚರಿಸಲು ಅವಕಾಶವನ್ನು ಒದಗಿಸುತ್ತದೆ. ಪ್ರತಿ ಸೀಟಿನ ಬೆಲೆಯನ್ನು ರೂ.700 ಎಂದು ನಿಗದಿಪಡಿಸಲಾಗಿದೆ. ಪ್ರಸ್ತುತ, ಮುಂಚಿತವಾಗಿ ಸೀಟುಗಳನ್ನು ಕಾಯ್ದಿರಿಸುವವರಿಗೆ ವಿಶೇಷ ಪ್ರಯೋಜನಗಳನ್ನು ಸಹ ನೀಡುತ್ತಿದ್ದಾರೆ.
ಬೇಕಲ್ ಬೀಚ್ ಪಾರ್ಕ್‍ನ ನಿರ್ದೇಶಕ ಅನಸ್ ಮುಸ್ತಫಾ ಮಾತನಾಡಿ, ಎತ್ತರದಲ್ಲಿ ಕುಳಿತು ಆಹಾರ ಸೇವನೆ ಸಾಹಸ ಮತ್ತು ಉತ್ತಮ ಆಹಾರ ಸಂಯೋಜಿಸುವ ಮೂಲಕ ಸಂದರ್ಶಕರಿಗೆ ಅಸಾಧಾರಣ ಅನುಭವವನ್ನು ನೀಡುತ್ತದೆ ಎಂದಿರುವರು.
ಸ್ಕೈ ಡೈನಿಂಗ್ ಆಗಮನದೊಂದಿಗೆ, ಬೇಕಲ್ ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವಾಗಲಿದೆ ಎಂದು ಅವರು ಹೇಳಿರುವರು.
ಏತನ್ಮಧ್ಯೆ, ಸುರಕ್ಷತಾ ಕಾರಣಗಳಿಂದಾಗಿ ಮಳೆಗಾಲದಲ್ಲಿ ಸ್ಕೈ ಡೈನಿಂಗ್ ಕಾರ್ಯನಿರ್ವಹಿಸುವುದಿಲ್ಲ. ಕ್ರೇನ್, ಡೈನಿಂಗ್ ಟೇಬಲ್ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಅಳವಡಿಸುವ ಯೋಜನೆಗೆ 2.5 ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.






