HEALTH TIPS

ಮುಗ್ಧತೆ ಇರುವಲ್ಲಿ ಅನುಗ್ರಹ ಶಕ್ತಿ ನಿರಂತರ-ಸಾಧ್ವಿ ಮಾತಾನಂದಮಯೀ

ಮಧೂರು: ಮುಗ್ದತೆ ಇರುವಲ್ಲಿ ಅನುಗ್ರಹ ಶಕ್ತಿ ನಿರಂತರವಾಗಿರುವುದಲ್ಲದೆ,  ಪರಹಿತದಲ್ಲಿ ಪರಮ ಸುಖ ಅಡಕವಾಗಿರುತ್ತದೆ ಎಂದು  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀಅಮೃತಾನಂದಮಯೀ ತಿಳಿಸಿದ್ದಾರೆ.  ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿನಡೆಯುತ್ತಿರುವ ಅಷ್ಟಬಂಧಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯಅಂಗವಾಗಿ ಮಂಗಳವಾರ ಬೆಳಿಗ್ಗೆ ನಡೆದಧಾರ್ಮಿಕಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.


ತ್ರಿಗುಣಗಳನ್ನು ಮೇಳೈಸಿರುವ ಮಾತೃಶಕ್ತಿ  ಭಾರತೀಯ ಸಂಸ್ಕೃತಿ ಸಂವರ್ಧನೆಗೆ ಚಾಲಕ ಶಕ್ತಿಯಾಗಿದೆ. ಭಾರತದ ಶಕ್ತಿ ಇಲ್ಲಿಯ ಆಧ್ಯಾತ್ಮಿಕ ಸಾನ್ನಿಧ್ಯಗಳಾಗಿದ್ದು, ಪ್ರತಿ ಊರಿಗೂ ಅಲ್ಲಿಯ ಆರಾಧನಾಲಯಗಳು ಶೃಂಗಾರವಾಗಿದೆ. ಮಧುವಾಹಿನಿ ತಟದ ಮಧೂರು ಸನ್ನಿಧಿಯೆಂಬ ಪುಷ್ಪಕ್ಕೆ ಭಕ್ತರೆಂಬ ಪತಂಗಗಳು ಮುತ್ತಿ ನಡೆಯುತ್ತಿರುವ ಕರಾವಳಿಯ ಈ ಮಹಾಕುಂಭ ನವ ಚೇತನವನ್ನು ಮೂಡಿಸಿದೆ. ಮಹಾಗಣಪತಿಯ ನಿಗ್ರಹಾನುಗ್ರಹ ಶಕ್ತಿ ನಮ್ಮೆಲ್ಲರನ್ನೂ ಸಂರಕ್ಷಿಸಲಿ ಎಂದು ತಿಳಿಸಿದರು. 

ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯೆ ಮಲಾರ್ ಬೀಡು ಮಲ್ಲಿಕಾ ಪ್ರಶಾಂತ್ ಪಕಳ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೇರಳ ಹಿಂದೂ ಐಕ್ಯವೇದಿಯ ರಕ್ಷಾಧಿಕಾರಿ, ಪ್ರಖರ ವಾಗ್ಮಿ ಶಶಿಕಲಾ ಟೀಚರ್ ಪಟ್ಟಾಂಬಿ ಅವರು ಪ್ರಧಾನ ಉಪನ್ಯಾಸ ನೀಡಿ, ಆಡಳಿತ ಚುಕ್ಕಾಣಿ ಹಿಡಿದವರು ಸ್ತ್ರೀ ಶಾಸ್ತೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಭಾರತದ ಸಂಸ್ಕೃತಿ ಸ್ತ್ರೀಯನ್ನು 'ಶಕ್ತಿ'ಯಾಗಿ ಶತಮಾನಗಳಿಂದ ಪರಿಗಣಿಸಿ ಬೆಂಬಲಿಸುತ್ತಾ ಬಂದಿದೆ. ಗಣಪತಿಯನ್ನು ಸರ್ವ ಗಣಾಧ್ಯಕ್ಷನಾಗಿ, ವಿಘ್ನ ನಿವಾರಕನಾಗಿ ಬೆಳೆಸಿದ್ದ ಪಾರ್ವತೀ ಮಾತೆಯ ಆದರ್ಶ ಸ್ತ್ರೀ ಐಕ್ಯದ ಪ್ರೇರಕ ಶಕ್ತಿಯಾಗಿದೆ. ವರ್ತಮಾನದ ಯುವ ಸಮೂಹ ಭಿನ್ನ ಹಾದಿಯನ್ನುತುಳಿಯುತ್ತಿರುವ ಹಂತದಲ್ಲಿ ನಿಜಾರ್ಥದ ಪಾರ್ವತಿಯಾಗುವ ಕಾಲಸನ್ನಿತವಾಗಿದೆ. ಕೈತುತ್ತು ನೀಡಿ ಪೆÇೀಶಿಸುವ ಅದೇ ಕೈಯಿಂದ ಸನ್ನಡತೆಯ. ಧಾರ್ಮಿಕ ಮೌಲ್ಯಗಳ ಬದುಕನ್ನೂ ಕಲಿಸಬೇಕಾಗಿದೆ. ಸಭ್ಯತೆಯನ್ನು ಮೀರುವ ಕಲೆ ಹಾಗೂ ಸಂಸ್ಕೃತಿಗಳ ವಿಕೃತಿಯಿಂದ  ಕೇಡಷ್ಟೇಸಂಭವಿಸಲು ಸಾಧ್ಯ. ಪ್ರಬುದ್ಧ ರಾಷ್ಟ್ರ ಹಾಗೂ ವ್ಯಕ್ತಿ ಗೌರವವಿರುವ ಯುವತಲೆಮಾರು ಬೆಳೆದುಬರಲಿ ಎಂದು ತಿಳಿಸಿದರು. 


ಸಂದರ್ಭ ಉಳಿಪಾಡಿಗುತ್ತು ಶಕುಂತಲಾ ಯು.ಟಿ.ಆಳ್ವ ಅವರನ್ನುಅಭಿನಂದಿಸಿ ಗೌರವಿಸಲಾಯಿತು. ಮಾಣಿಲ ಶ್ರೀಧಾಮದ ಮೋಹನದಾಸಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹರಸಿದರು. ಬ್ರಹ್ಮಕಲಶೋತ್ಸವಸಮಿತಿ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಸರಗೋಡು ಜಿ.ಪಂ.ಅಧ್ಯಕ್ಷೆ ವಕೀಲೆಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಮಧೂರು ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿಜ, ಗ್ರಾಂ ಪಂಚಾಯಿತಿ ಸದಸ್ಯೆಯರಾದ ರಾಧಾ ಕೆ., ಜನನಿ ಟಿ.ಕೆ., ಸೌಮ್ಯಾ ದಿನೇಶ, ಶ್ರೀಮತಿ ಟೀಚರ್, ಅಂಬಿಳಿಸಿ.ಎಂ., ಉಷಾ ಸುರೇಶ್, ಸ್ಮಿತಾ ಸುಧಾಕರನ್, ವೈದ್ಯೆಯರಾದ ವೀಣಾಮಂಜುನಾಥ್ ಕಾಸರಗೋಡು, ರಮ್ಯಾ ಎಸ್ ಉಳಿಯತ್ತಡ್ಕ, ಲೀಲಾವತಿ ವಿಶ್ವನಾಥ ರೈ ಮಾಯಿಪ್ಪಾಡಿ, ಉದ್ಯಮಿ ಬಿಂದು ದಾಸ್, ಮೀರಾ ಕಾಮತ್, ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ತುಳು ಚಲನಚಿತ್ರ ನಟ, ರಂಗಕರ್ಮಿ ಅರವಿಂದಬೋಳಾರ್ ಉಪಸ್ಥಿತರಿದ್ದು ಶುಭಹಾರೈಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೌಮ್ಯಾಶ್ರೀಕಾಂತ್ ಮಧೂರು ಹಾಗೂ ಮೀರಾ ಆಳ್ವ ನಿರೂಪಿಸಿದರು. ಸಂಚಾಲಕಿ ಶೋಭಾ ಗಟ್ಟಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries