HEALTH TIPS

ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಹಾಕಿ; ತಮಿಳುನಾಡಿನ ನಾಯಕರಿಗೆ ಪ್ರಧಾನಿ ಮೋದಿ ಸಲಹೆ

ರಾಮೇಶ್ವರ: ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು (ಭಾನುವಾರ) ಚಾಲನೆ, ಶಂಕುಸ್ಥಾಪನೆ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಾತೃ ಭಾಷೆಗೂ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ. 

ರಾಮೇಶ್ವರಂನಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಮಾಡಿ ಎಂದು ತಮಿಳುನಾಡಿನ ನಾಯಕರಿಗೆ ಕರೆ ನೀಡಿದ್ದಾರೆ.

ಯಾವುದೇ ನಾಯಕರನ್ನು ಉಲ್ಲೇಖಿಸದೇ ಈ ಕುರಿತು ಹೇಳಿರುವ ಪ್ರಧಾನಿ ಮೋದಿ, 'ನನಗೆ ತಮಿಳಿನಾಡಿನ ನಾಯಕರಿಂದ ಪತ್ರಗಳು ಬರುತ್ತಿವೆ. ಆದರೆ ಅಚ್ಚರಿಯ ವಿಷಯವೆಂದರೆ ಯಾರೂ ಕೂಡಾ ತಮಿಳಿನಲ್ಲಿ ಸಹಿ ಹಾಕುವುದಿಲ್ಲ. ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಮಾಡಿ' ಎಂದು ಸಲಹೆ ಮಾಡಿದ್ದಾರೆ.

ಮಾತೃಭಾಷೆಗೆ ಆದ್ಯತೆ ನೀಡುವ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, 'ಜಗತ್ತಿನ ಎಲ್ಲ ಕಡೆಗಳಿಗೂ ತಮಿಳು ಭಾಷೆಯನ್ನು ತಲುಪಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಹೇಳಿದ್ದಾರೆ.

ಬಡವರಿಗೆ ತಮಿಳು ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries