ಕುಂಬಳೆ: ಆರಿಕ್ಕಾಡಿ ಹನುಮಾನ್ ನಗರದ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದಂಗವಾಗಿ ಗಣಹೋಮ, ನವಕಾಭಿಷೇಕ, ದುರ್ಗಾದೇವಿಯ ದೀಪ ಪ್ರತಿಷ್ಠೆ, ರಾಮರಾಜ ಕ್ಷತ್ರಿಯ ಸೇವಾ ಸಂಘ ಕುಂಬಳೆ ಮತ್ತು ಹನುಮ ಭಕ್ತ ಭಜನ ಸಂಘ ಆರಿಕ್ಕಾಡಿ ಇವರಿಂದ ಭಜನೆ ಕಾರ್ಯಕ್ರಮ, ಮಹಾಪೂಜೆ, ಅನ್ನ ಸಂತರ್ಪಣೆ, ತಾಯಂಬಕ ಮತ್ತು ಸ್ಯಾಕ್ಷಾಫೆÇೀನ್ ವಾದನ, ಉತ್ಸವ, ಶ್ರೀ ಭೂತಬಲಿ, ಸಿಡಿಮದ್ದು ಪ್ರದರ್ಶನ, ದರ್ಶನ ಬಲಿ, ರಾಜಾಂಗಣ ಗಂಧ ಪ್ರಸಾದ ವಿತರಣೆ, ಶ್ರೀ ಮಲ್ಲಿಕಾರ್ಜುನ ಸನ್ನಿ„ಯಲ್ಲಿ ವಿಶೇಷ ಪಂಚಗವ್ಯ, ಪುಣ್ಯಾಹ, ವಿಶೇಷ ನೈವೇದ್ಯ ಮಹಾಪೂಜೆ, ಶ್ರೀ ರಕ್ತೇಶ್ವರಿ ಮತ್ತು ಗುಳಿಗನ ಕೋಲ ನಡೆಯಿತು.




.jpg)
