ಅಹಮದಾಬಾದ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಗಲೋಟಕ್ಕೆ ಕಡಿಕಾಣ ಹಾಕಿದ್ದು ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ಎಂದು ಕಾಂಗ್ರೆಸ್ ಮುಖಂಡ ದೀಪೆಂದರ್ ಹೂಡ ಬುಧವಾರ ಹೇಳಿದರು.ಇಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
400 ಸ್ಥಾನಗಳನ್ನು ಪಡೆಯುವ ಕನಸು ಕಂಡಿದ್ದ ಬಿಜೆಪಿಗೆ ರಾಹುಲ್ ಗಾಂಧಿ ನ್ಯಾಯ ಯಾತ್ರೆಯ ಮೂಲಕ ಕಡಿವಾಣ ಹಾಕಿದರು.
ಮುಂದಿನ ದಿನಗಳಲ್ಲಿ ಬಿಜೆಪಿಗೆ ಎಲ್ಲಾ ಚುನಾವಣೆಗಳಲ್ಲಿ ಸೋಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಕೇವಲ ನಕಲಿ ರಾಷ್ಟ್ರೀಯ ವಾದದ ಬಗ್ಗೆ ಮಾತನಾಡುತ್ತಿದೆ. ಇವರ ರಾಷ್ಟ್ರೀಯವಾದ ಕೇವಲ ಅಧಿಕಾರ ಪಡೆಯಲು ಮಾತ್ರ ಎಂದು ಅವರು ಆರೋಪಿಸಿದರು.
ಹರಿಯಾಣದ ಸಂಸದರಾಗಿರುವ ಹೂಡ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.




