HEALTH TIPS

ಹುಡುಗಿಯರಲ್ಲಿ ಎಂಡಿಎಂಎ ಬಳಕೆ ವ್ಯಾಪಕವಾಗಿ ಹರಡುತ್ತಿದೆ: ಆರ್. ಶ್ರೀಲೇಖಾ

ತಿರುವನಂತಪುರಂ: ಕೆಲವು ರಾಜಕೀಯ ನಾಯಕರು ಸೇರಿದಂತೆ ಹಲವರು ಕೊಕೇನ್ ಬಳಸುತ್ತಿದ್ದಾರೆ ಮತ್ತು ಹುಡುಗಿಯರಲ್ಲಿ ಎಂಡಿಎಂಎ ಬಳಕೆ ವ್ಯಾಪಕವಾಗಿ ಹರಡುತ್ತಿದೆ ಎಂದು ಮಾಜಿ ಡಿಜಿಪಿ ಆರ್. ಶ್ರೀಲೇಖಾ ಹೇಳಿರುವರು. ಶ್ರೀಲೇಖಾ ಅವರು ಮಾದಕ ದ್ರವ್ಯ ವಿರೋಧಿ ಸಾರ್ವಜನಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಏಷ್ಯದಾದ್ಯಂತ ಮಾದಕ ದ್ರವ್ಯಗಳನ್ನು ಪೂರೈಸುವ ದೇಶಗಳು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್, ಇವುಗಳನ್ನು ಗೋಲ್ಡನ್ ಕ್ರೆಸೆಂಟ್ ಎಂದು ಕರೆಯಲಾಗುತ್ತದೆ ಮತ್ತು ಥೈಲ್ಯಾಂಡ್, ಲಾವೋಸ್ ಮತ್ತು ಮ್ಯಾನ್ಮಾರ್, ಇವುಗಳನ್ನು ಗೋಲ್ಡನ್ ಟ್ರಯಾಂಗಲ್ ಮತ್ತು ರಿಂಗ್ ಆಫ್ ಡೆತ್ ಎಂದು ಕರೆಯಲಾಗುತ್ತದೆ ಎಂದು ಶ್ರೀಲೇಖಾ ಹೇಳಿದರು. ಚಳಿಗಾಲದ ತಿಂಗಳುಗಳಲ್ಲಿ ಭದ್ರತಾ ಪಡೆಗಳ ಗಮನಕ್ಕೆ ಬಾರದೆ ಅವು ಸಮುದ್ರದ ಮೂಲಕ ಭಾರತವನ್ನು ತಲುಪುತ್ತವೆ. ಸಮುದ್ರದ ಮೂಲಕ ಮಾದಕ ದ್ರವ್ಯಗಳನ್ನು ಸಾಗಿಸಲು ಕಾಸರಗೋಡು ಸುತ್ತಮುತ್ತ ಕೇಂದ್ರೀಕೃತವಾದ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಡಿಜಿಪಿ ಬಹಿರಂಗಪಡಿಸಿದರು. 

ವ್ಯಾಪಕವಾಗಿರುವ ಮಾದಕ ವಸ್ತುಗಳ ದುರುಪಯೋಗದ ಸರಪಳಿಯನ್ನು ಕಡಿಯಬೇಕು ಮತ್ತು ಮಾದಕ ವಸ್ತುಗಳ ದುರುಪಯೋಗವು ಶತ್ರು ರಾಷ್ಟ್ರಗಳಿಗೆ ತಾತ್ಕಾಲಿಕ ಸಂತೋಷಕ್ಕಾಗಿ ಲಾಭ ಗಳಿಸುವ ಒಂದು ಸಾಧನವಾಗಿದೆ ಎಂಬುದನ್ನು ಯುವಜನರಿಗೆ ಅರ್ಥಮಾಡಿಕೊಳ್ಳುವಂತೆ ಮಾಡಬೇಕು ಎಂದು ಶ್ರೀಲೇಖಾ ಹೇಳಿದರು.

ಮಾದಕ ದ್ರವ್ಯ ವಿರೋಧಿ ಜನತಾ ಸಭೆ ರಾಜ್ಯ ಸಮಿತಿ ರಚನೆ:

ತಿರುವನಂತಪುರಂ: ಮಾದಕ ದ್ರವ್ಯ ವಿರೋಧಿ ಜನತಾ ಸಭೆಯ ಸಮಾವೇಶಕ್ಕೆ ರಾಜ್ಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾಜಿ ಡಿಜಿಪಿ ಆರ್. ಶ್ರಲೇಖಾ ಅಧ್ಯಕ್ಷರಾಗಿದ್ದಾರೆ. ಧನಂಜಯ್ ಸಗ್ದೇವ್, ಎಂ.ಎಸ್. ಸುನಿಲ್, ಡಾ. ಷರೀಫ್ ಮೊಹಮ್ಮದ್, ಪ್ರೊ. ಎಂ.ಎಸ್. ರಮೇಶನ್ ಮತ್ತು ಕುಮ್ಮನಂ ರಾಜಶೇಖರನ್ ಪೆÇೀಷಕರಾಗಿದ್ದರೆ, ಫಾದರ್ ಅಲೆಕ್ಸಾಂಡರ್ ಕುದರಾತಿಲ್, ರಾಜೀವ್ ಆಳುಂಕಲ್, ಮತ್ತು ಡಾ.ಬಾಲಚಂದ್ರನ್ ಮನ್ನತ್, ಡಾ.ರಂಜಿತ್ ವಿಜಯಹರಿ ಮತ್ತು ಕರ್ನಲ್ ಅಂಬಿಲಿ ಲಾಲ್ ಕೃಷ್ಣ ಉಪಾಧ್ಯಕ್ಷರಾಗಿದ್ದಾರೆ.

ಕೆ. ಸುರೇಶ್ ಕುಮಾರ್ ಸಾಮಾನ್ಯ ಸಂಚಾಲಕರು. ರಾಜೇಶ್ ಕೊಲ್ಲಂ ಮತ್ತು ಎಂ.ಕೆ. ಜಂಟಿ ಸಂಚಾಲಕರು. ಉಣ್ಣಿಕೃಷ್ಣನ್ ಕೊಟ್ಟಾಯಂ, ಅಡ್ವ.ಜಿ. ಅಂಜನಾ ದೇವಿ, ಕೆ.ಜಿ. ಪ್ರಿಯ ರೇ, ಕೆ.ಎಸ್. ಅನಿಲ್ ಕುಮಾರ್ ಮತ್ತು ರಮೇಶ್ ಪೆರುಂಬಾವೂರ್ ಅವರನ್ನು ಖಜಾಂಚಿಗಳನ್ನಾಗಿ ನೇಮಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries