ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿ ಹಾಗೂ ಕಾಸರಗೋಡು ಪ್ರೆಸ್ ಕ್ಲಬ್ ಜಂಟಿಯಾಗಿ ಕಾಸರಗೋಡು ಜಿಲ್ಲೆ 40 ವರ್ಷಗಳ ವಿಚಾರ ಸಂಕಿರಣ'ಕಾಸರಗೋಡು @ 40' ಕಾರ್ಯಕ್ರಮ ಏ. 8ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸುವರು. ಕಾಸರಗೋಡಿನ ಕೃಷಿ ಸಂಸ್ಕøತಿ ಕುರಿತು ಕಾಸರಗೋಡಿನ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಪ್ರಾಧ್ಯಾಪಕ ಸಿ.ಬಾಲನ್, ಕಾಸರಗೋಡಿನ ಕೃಷಿ ಸಂಸ್ಕøತಿ ಎಂಬ ವಿಷಯದಲ್ಲಿ ಡಾ. ಸಿ. ತಂಬಾನ್, ಸ್ಥಳೀಯಾಡಳಿತ ಮತ್ತು ಅಭಿವೃದ್ಧಿ ಕುರಿತು ಡಾ.ಸಿ.ತಂಬಾನ್,
ನವ ಕೇರಳ ಮತ್ತು ಕಾಸರಗೋಡು ವಿಷಯದ ಕುರಿತು ಪಪ್ಪನ್ ಕುಟ್ಟಮತ್, ನವ ಕೇರಳವೂ ಕಾಸರಗೋಡೂ ಎಂಬ ವಿಷಯದ ಬಗ್ಗೆ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಪ್ರಬಂಧ ಮಂಡಿಸಲಿದ್ದಾರೆ. ಡಾ.ವಿ.ಪಿ.ಪಿ.ಮುಸ್ತಫಾ ಸಂಚಾಲಕರಾಗಿರುವರು.




