ಕಾಸರಗೋಡು : ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘಟನೆಯಾದ ಸಕ್ಷಮ ರಾಜ್ಯ ಪ್ರತಿನಿಧಿ ಸಭೆ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ನಡೆಯಿತು. ಪ್ರತಿನಿಧಿ ಸಭೆಯನ್ನು ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು. ಸಂಘಟನೆ ರಾಜ್ಯಾಧ್ಯಕ್ಷ ಡಾ.ಪಿ ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದ್ದರು.
ಸಕ್ಷಮಾದ ತ್ರೈಮಾಸಿಕ ಸಮದೃಷ್ಟಿಯ ಮೊದಲ ಆವೃತ್ತಿಯನ್ನು ಐಎಎಸ್ ಅಧಿಕಾರಿ ಕೆ. ಶಶಿಧರನ್ ಅವರಿಗೆ ನೀಡುವ ಮೂಲಕ ಸ್ವಾಮೀಜಿ ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಎ.ಸಿ.ಗೋಪಿನಾಥ್, ರಾಜ್ಯ ಸಮಿತಿ ಸದಸ್ಯ ರಘುನಾಥ್ ಉಪಸ್ಥಿತರಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕøತ ನಿವೃತ್ತ ಕ್ಯಾಪ್ಟನ್ ಸಾಜಿ ಥಾಮಸ್ ಹಾಗೂ ಅಶೋಕ್ ಕಾಸರಗೋಡು ಅವರನ್ನು ಸಕ್ಷಮ ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಕೇರಳದ ಎಲ್ಲಾ ಜಿಲ್ಲೆಗಳಿಂದ ನೂರೈವತ್ತರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಘಟನೆ ರಾಜ್ಯ ಕಾರ್ಯದರ್ಶಿ ಓ.ಆರ್.ಹರಿದಾಸ್ ಸ್ವಾಗತಿಸಿದರು. ರಾಜ್ಯ ಸಮಿತಿ ಜತೆ ಕಾರ್ಯದರ್ಶಿ ಅನಿತಾ ನಾಯಕಂ ವಂದಿಸಿದರು.




