HEALTH TIPS

ಸಾರ್ವಕಾಲಿಕ ದಾಖಲೆ ತಲುಪಿದ ಚಿನ್ನದ ಬೆಲೆ : ಲಕ್ಷ ರೂಪಾಯಿ ಗಡಿ ದಾಟುತ್ತಾ ?

ನವದೆಹಲಿ: ಮಂಗಳವಾರ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 92,840 ರೂ.ಗಳಿಗೆ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅದೇ ಸಮಯದಲ್ಲಿ, 24 ಕ್ಯಾರೆಟ್ ಚಿನ್ನದ ದರ ಕೂಡಾ ಏರಿಕೆಯಾಗಿದೆ.

10 ಗ್ರಾಂಗೆ ರೂ. 92,000 ರೂಪಾಯಿ ದಾಟಿದೆ. ಈ ಹೆಚ್ಚಳಕ್ಕೆ ಹೂಡಿಕೆದಾರರ ಕಳವಳಗಳು ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಭಯ ಕಾರಣ ಎಂದು ಹೇಳಲಾಗುತ್ತಿದೆ. ಇದು ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ಬೆಲೆಯೂ ಏರಿಕೆಯಾಗುತ್ತಿದೆ. MCX ನಲ್ಲಿ ಬೆಳ್ಳಿಯ ದರ ಸಹ ಏರಿಕೆಯ ಪ್ರವೃತ್ತಿಯನ್ನು ತೋರಿಸುತ್ತಿವೆ. ಇದು ಪ್ರಸ್ತುತ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿ ವಹಿವಾಟು ನಡೆಸುತ್ತಿದೆ. ಆದರೆ, ಮಂಗಳವಾರ ಬೆಳ್ಳಿ ಬೆಲೆ ಪ್ರತಿ ಕಿಲೋಗೆ 1,000 ರೂ.ವರೆಗೆ ಏರಿಕೆಯಾಗಿದೆ. ಪ್ರಸ್ತುತ, ಪ್ರತಿ ಕಿಲೋ ಬೆಳ್ಳಿ ಬೆಲೆ ರೂ. 1,05,000 ಆಗಿದ್ದರೆ, ಕೆಲವು ಪ್ರದೇಶಗಳಲ್ಲಿ ಇದು ರೂ.14,000 ಗಳವರೆಗೂ ಇದೆ.

ಏಪ್ರಿಲ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1 ಲಕ್ಷ ರೂ. ತಲುಪಬಹುದು ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಅನಿಶ್ಚಿತತೆ ಮತ್ತು ವ್ಯಾಪಾರ ಉದ್ವಿಗ್ನತೆಗಳಿಂದಾಗಿ ಚಿನ್ನದ ಹೂಡಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಈ ಬೆಲೆ ಏರಿಕೆಗೆ ಮತ್ತಷ್ಟು ಉತ್ತೇಜನ ನೀಡಿವೆ. ಏಪ್ರಿಲ್‌ನಲ್ಲಿ ಟ್ರಂಪ್ ಸುಂಕಗಳನ್ನು ಜಾರಿಗೆ ತರುವುದರಿಂದ ಆರ್ಥಿಕ ಕುಸಿತದ ಭಯವು ಚಿನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಪ್ರಸ್ತುತ, ಮಂಗಳವಾರ ಸಂಜೆಯ ಹೊತ್ತಿಗೆ, ಚಿನ್ನದ ಬೆಲೆ ರೂ. 930 ವರೆಗೂ ಏರಿಕೆಯಾಗಿದೆ.

ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 85,100 ಆಗಿದ್ದು, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ರೂ. 92,840‌ ವರೆಗೂ ಏರಿಕೆಯಾಗಿದೆ. ಈ ಬೆಲೆಗಳಲ್ಲಿ ಭಾರತದಲ್ಲಿ ಚಿನ್ನ ಖರೀದಿಸಲು ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮತ್ತಷ್ಟು ಬೆಳೆಯುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

ಬಜೆಟ್ ಮಂಡನೆಗೂ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವೇಗವಾಗಿ ಏರುತ್ತಿವೆ. ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರಿಂದ ಹೆಚ್ಚಿದ ಬೇಡಿಕೆಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಅಮೆರಿಕದ ನೀತಿಗಳಿಂದಾಗಿ ಜನರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಅದರ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಬಡ್ಡಿದರಗಳನ್ನು ಕಡಿತಗೊಳಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದರೆ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಮದುವೆಗಳು ಮತ್ತು ಹಬ್ಬಗಳ ಸಮಯದಲ್ಲಿ ಅವುಗಳ ಬೇಡಿಕೆ ಹೆಚ್ಚಿರಬಹುದು. ಈ ಕಾರಣದಿಂದಾಗಿ ಬೆಲೆಗಳು ಹೆಚ್ಚಾಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries