ನವದೆಹಲಿ: ಶೇ.9.9ರಷ್ಟು ಏರಿಕೆಯೊಂದಿಗೆ 2025ರ ಮಾರ್ಚ್ ತಿಂಗಳಿನಲ್ಲಿ ಒಟ್ಟು 1.96 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, 2ನೇ ಸಾರ್ವಕಾಲೀಕ ಗರಿಷ್ಠ ಸಂಗ್ರಹ ಎಂಬ ದಾಖಲೆ ಬರೆದಿದೆ.
ದೇಶೀಯ ವ್ಯವಹಾರಗಳಲ್ಲಿ ಶೇ.8.8ರ ಏರಿಕೆಯೊಂದಿಗೆ 1.49 ಲಕ್ಷ ಕೋಟಿ ರೂ., ಆಮದು ವ್ಯವಹಾರಗಳಲ್ಲಿ ಶೇ.13.56ರಷ್ಟು ಏರಿಕೆಯೊಂದಿಗೆ 46,919 ಕೋಟಿ ರೂ.
ಜಿಎಸ್‌ಟಿ ಸಂಗ್ರಹವಾಗಿದೆ. ಈ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ (38,145 ಕೋಟಿ ರೂ.), ರಾಜ್ಯ ಜಿಎಸ್‌ಟಿ (49,891 ಕೋಟಿ ರೂ.)ಗಳು ಸೇರಿದೆ. ಅಲ್ಲದೆ 12,253 ಕೋಟಿ ರೂ.ಗಳಷ್ಟು ಸೆಸ್ ಸಂಗ್ರಹವಾಗಿದೆ. ಈವರೆಗಿನ ಗರಿಷ್ಠ ಜಿಎಸ್‌ಟಿ ಸಂಗ್ರಹ 2024ರ ಏಪ್ರಿಲ್ (2.10 ಲಕ್ಷ ಕೋಟಿ ರೂ.)ನಲ್ಲಿ ದಾಖಲಾಗಿತ್ತು.




