HEALTH TIPS

ಬಜಕೂಡ್ಲು ಜಾತ್ರಾ ಮಹೋತ್ಸವ-ಇಂದು ಧ್ವಜಾರೋಹಣ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಏ. 9ರಿಂದ 13ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. 9ರಂದು ಬೆಳಗ್ಗೆ 10ಕ್ಕೆ ಗಣಪತಿ ಹೋಮ, ಶ್ರೀದೇವರ ನಡೆಯಲ್ಲಿ ಪ್ರಾರ್ಥನೆ, ಧ್ವಜಾರೋಹಣ, ನವಕಾಭಿಷೆಕ, ತುಲಾಭಾರ ಸೇವೆ ನಡೆಯುವುದು. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಶ್ರೀದೇವರ  ಬಲಿ ಉತ್ಸವ ನಡೆಯುವುದು.

10ರಂದು ಬೆಳಗ್ಗೆ 10ಕ್ಕೆ ದರ್ಶನಬಲಿ, ರಾತ್ರಿ ಕಟ್ಟೆಪೂಜೆ, 11ರಂದು ರಾತ್ರಿ ದೀಪೋತ್ಸವ, ಶ್ರೀದೆವರ ಭೂತಬಲಿ, ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ ನಡೆಯುವುದು. 12ರಂದು ಬೆಳಗ್ಗೆ 10ಕ್ಕೆ ಶ್ರೀ ದೇವರ ಅಯ್ಯಂಗಾಯಿ ದರ್ಶನ ಬಲಿ, ರಾತ್ರಿ 9ಕ್ಕೆ ಕಟ್ಟೆಪೂಜೆ, ರಥೋತ್ಸವ, ಬೆಡಿ, ದಸ್ನ, ಶಯನ ನಡೆಯುವುದು. 13ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾಹೋಮ, ಮಧ್ಯಾಹ್ನ 1.30ಕ್ಕೆ ಶ್ರೀದೇವರ ಬಲಿ ಹೊರಡುವುದು, ಕಟ್ಟೆಪೂಜೆ, ಅವಭೃತ ಸ್ನಾನಕ್ಕಾಗಿ ಕಾನಶಾಸ್ತರ ಸನ್ನಿಧಿಗೆ ಶ್ರೀದೇವರ ನಿರ್ಗಮನ, ನಂತರ ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ರಾತ್ರಿ 8ರಿಂದ ಶ್ರೀಪಿಲಿಭೂತ ನೇಮ ನಡೆಯುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries