ಬದಿಯಡ್ಕ: ಭಾರತೀಯ ಜನತಾಪಕ್ಷ ಕುಂಬ್ಡಾಜೆ ಪಂಚಾಯಿತಿ ಸಮಿತಿ ಆಶ್ರಯದಲ್ಲಿ ಪಕ್ಷದ ಸ್ಥಾಪನ ದಿನವನ್ನು ಆಚರಿಸಲಾಯಿತು. ಪಕ್ಷದ ಹಿರಿಯ ಮುಖಂಡ ದೇಶಿಯ ಸಮಿತಿ ಸದಸ್ಯ ಎಮ್ ಸಂಜೀವ ಶೆಟ್ಟಿ ಧ್ವಜಾರೋಹಣಗೈದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಮಂಡಲ ಉಪಾಧ್ಯಕ್ಷೆ ನಳಿನಿ ಕೃಷ್ಣ, ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಬೂತ್ ಅಧ್ಯಕ್ಷ ಶ್ಯಾಮ್, ಪ್ರಮುಖರಾದ ಜಯಪ್ರಕಾಶ್ ರೈ, ರಘು ಮಾಚವು, ಸುನಿತಾ ಜೆ ರೈ ಮೊದಲಾದವರು ಭಾಗವಹಿಸಿದ್ದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು.

.jpg)
