ಮಧೂರು: ಮಧೂರು ಶ್ರೀ ಮದನಂತೇಶ್ವರನೊಲಿದ ಮದರು ವಂಶಜರಾದ ಮೊಗೇರ ಸಮಾಜದ ವತಿಯಿಂದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಇತ್ತೀಚೆಗೆ ನಡೆಯಿತು. ಕೇರಳ ಸರ್ಕಾರದ ದೇವಸ್ವಂ ಇಲಾಖೆಯ ಸದಸ್ಯ ಎ.ಕೆ.ಶಂಕರ ಅವರ ಉಪಸ್ಥಿತಿಯೊಂದಿಗೆ ಇಚ್ಲಂಪಾಡಿ ಲಕ್ಷ್ಮಣ ಪೆರಿಯಡ್ಕ ಮತ್ತು ರಮೇಶ ಬನ್ನೂರು ಇವರ ಮುಂದಾಳುತ್ವದಲ್ಲಿ ಉಳಿಯತ್ತಡ್ಕ ಮೂಲಸ್ಥಾನದಿಂದ ಆರಂಭಗೊಂಡು ವಿವಿಧ ಕುಟುಂಬ ದೈವಸ್ಥಾನ, ಪ್ರಾದೇಶಿಕ ಸಮಿತಿ, ಸಂಘ ಸಂಸ್ಥೆಗಳು ಜತೆಗೂಡಿ ಸಮಾಜದ ಸಾಂಪ್ರದಾಯಿಕ ಕಲೆಯಾದ ದುಡಿ ನಲಿಕೆಯೊಂದಿಗೆ ವರ್ಣರಂಜಿತ ಚೆಂಡೆ ಮೇಳ, ಕುಣಿತ ಭಜನೆ, ಹುಲಿ ಕುಣಿತ, ಬ್ಯಾಂಡ್ ವಾದ್ಯಗಳೊಂದಿಗೆ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಿಸಲಾಯಿತು. 3000 ಕ್ಕೂ ಮಿಕ್ಕಿ ಮೊಗೇರ ಸಮಾಜದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.




.jpg)
