HEALTH TIPS

ಭಾರೀ ಪೋಲೀಸ್ ಬಂದೋಬಸ್ತ್ ನಲ್ಲಿ ಪೊಸೋಟು ಜಮಾಯತ್ ಆಡಳಿತ ಸಮಿತಿ ಚುನಾವಣೆ : 27 ಮಂದಿ ಆಯ್ಕೆ

ಮಂಜೇಶ್ವರ : ಪೊಸೋಟು ಆಡಳಿತ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಮಾಯತಿ  ನಿಕಟ ಪೂರ್ವ ಅಧ್ಯಕ್ಷ ಆರ್ ಕೆ ಬಾವ ಹಾಜೆಯವರನ್ನು ಬೆಂಬಲಿಸುವ 27 ಮಂದಿ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿ ಪೋಸೋಟು ಜಮಾಯತಿನಲ್ಲಿ ಎದುರಾಳಿಗಳ ಸದ್ದನ್ನು ಅಡಗಿಸುವ ಮೂಲಕ ಹೊಸ ಒಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪೊಸೋಟು ಜಮಾಯತ್ ಆಡಳಿತ ಸಮಿತಿಯಲ್ಲಿ ಕೆಲವೊಂದು ಮಂದಿ ವಿವಾದವನ್ನೆಬ್ಬಿಸಿ ಅದು ವಕ್ಫ್ ಮೆಟ್ಟಲೇರಿತ್ತು. ಇಲ್ಲಿಯೂ ಸಮಾಧಾನಗೊಳ್ಳದ ಅತೃಪ್ತರು ಜಮಾಯತ್ ಸಮಿತಿ ವಿರುದ್ಧ ಟ್ರಿಬ್ಯೂನಲ್ ನ್ಯಾಯಾಲಯದ  ಮೊರೆ ಹೋಗಿದ್ದರು ಕೊನೆಗೆ ಹೈ ಕೋರ್ಟ್ ಸೇರಿದಂತೆ ಕೋರ್ಟ್ ಕಟಕಟೆ ಹತ್ತಿ ಕೊನೆಗೆ ಹೈ ಕೋರ್ಟ್ ನಿರ್ದೇಶ ಪ್ರಕಾರ 2024 ಎಪ್ರಿಲ್ 6 ಭಾನುವಾರ ಚುನಾವಣೆಗೆ ದಿನ ನಿಗದಿಪಡಿಸಲಾಗಿತ್ತು. 

ಇದರಂತೆ ಭಾನುವಾರ ಚುನಾವಣಾಧಿಕಾರಿ ಹಾಗೂ ನಿವೃತ ಜಿಲ್ಲಾ ನ್ಯಾಯಾಧೀಶ ಶಂಕರನ್ ನಾಯರ್ ಹಾಗೂ ವಕ್ಫ್ ಬೋರ್ಡ್ ನೇಮಕಗೊಳಿಸಿದ ಮುತವಲ್ಲಿ ಸಯ್ಯದ್ ಮುಹಿನುದ್ದೀನ್ ತಂಙಳ್ ರವರ ನೇತೃತ್ವದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ನಲ್ಲಿ ಚುನಾವಣೆ ನಡೆದಿದೆ.

ಮೊದಲು 54 ಮಂದಿ ವೈಯುಕ್ತಿಕ ಸ್ಪರ್ಧಾಕಣದಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಒಬ್ಬ ಅಭ್ಯರ್ಥಿ ನಾಮ ಪತ್ರ ಹಿಂಪಡೆದ ಹಿನ್ನೆಲೆಯಲ್ಲಿ 53 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಒಟ್ಟು 518 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 11 ಮತಗಳು ಅಸಿಂಧುವಾಗಿದೆ. ಕೊನೆಯಲ್ಲಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸುವಾಗ ವೈಯಕ್ತಿಕವಾಗಿ ಸ್ಪರ್ಧಿಸಿದ ಆರ್ ಕೆ ಬಾವ ಹಾಜಿ ಬೆಂಬಲಿತ 27 ಮಂದಿ ಸರಿ ಸುಮಾರು 150 ಕ್ಕಿಂತ ಮಿಕ್ಕ ಮತಗಳಿಂದ ಅಭೂತಪೂರ್ವ ವಿಜಯ ಸಾಧಿಸಿದ್ದಾರೆ.

ಪೊಸೋಟು ಜಮಾಹತಿನ ಇತಿಹಾಸದಲ್ಲಿ ಆಡಳಿತ ಸಮಿತಿಗೆ ಇದೇ ಮೊದಲ ಬಾರಿ ಚುನಾವಣೆ ನಡೆದಿದ್ದು, ಮುಂಜಾಗ್ರತ ಕ್ರಮವಾಗಿ  ಭಾರೀ ಪೆÇಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದರೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಚುನಾವಣೆ ಕೊನೆಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ವಿಜೇತ ಆರ್ ಕೆ ಬಾವಹಾಜಿ ಬೆಂಬಲಿತ ಅಭ್ಯರ್ಥಿಗಳು ಸಭೆ ಸೇರಿ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ ಆರ್ ಕೆ ಬಾವ ಹಾಜಿಯವರ ನೇತೃತ್ವದ ಆಡಳಿತ ಸಮಿತಿ ಮಸೀದಿ ನವೀಕರಣ, ಅಪಾರ್ಟ್‍ಮೆಂಟ್ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಗಳನ್ನು ಮಾಡಿತ್ತು. ಅದೇ ರೀತಿ ಸಮುದಾಯದ ನಿರ್ಗತಿಕ ಕುಟುಂಬಗಳ ಕಣ್ಣೀರೊರೆಸಲು ಅಭಿವೃದ್ಧಿ ಸಮಿತಿ ರೂಪೀಕರಿಸಿ ಸಹಾಯವನ್ನು ಒದಗಿಸಲಾಗುತಿತ್ತು. ಇದು ಊರವರ ಭಾರೀ ಪ್ರಶಂಶೆಗೂ ಪಾತ್ರವಾಗಿತ್ತು. ಕೊನೆಯಲ್ಲಿ ಜಯ ಗಳಿಸಿದ ಸ್ಪರ್ಧಾಳುಗಳನ್ನು ದರ್ಗಾ ಶರೀಫ್ ಗೆ ಮೆರವಣಿಗೆ ಮೂಲಕ ಕೊಂಡೊಯ್ದು ಬೆಂಬಲಿಗರು ಸಂಭ್ರಮದಿಂದ ವಿಜಯೋತ್ಸವ ನಡೆಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries