HEALTH TIPS

ವರ್ಕಾಡಿಯಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ

ಮಂಜೇಶ್ವರ :  ಇಂಡಿಯನ್ ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿಯ ನೇತೃತ್ವದಲ್ಲಿ ವರ್ಕಾಡಿ ಮಜೀರ್ ಪಳ್ಳದಲ್ಲಿ ಬೃಹತ್ ರಕ್ತದಾನ ಶಿಬಿರ ಭಾನುವಾರ ಜರಗಿತು. ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೇನೇಪೋಯ  ಆಸ್ಪತ್ರೆಯ ಸಹಯೋಗದೊಂದಿಗೆ ಜರುಗಿದ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ಕೆ. ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಅಧ್ಯಕ್ಷೆ ಶರ್ಮಿಳಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುμÉೂೀತ್ತಮ ಅರಿಬೈಲು, ನರಿಂಗಾನ ಗ್ರಾ. ಪಂ. ಅಧ್ಯಕ್ಷ  ನವಾಜ್ ನರಿಂಗಾನ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹನೀಫ್ ಎಚ್. ಎ., ವರ್ಕಾಡಿ ಯುಡಿಎಫ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಮಜಾಲ್, ಹಿರಿಯ ಕಾಂಗ್ರೆಸ್ ಮುಖಂಡ ಎಸ್. ಅಬ್ದುಲ್ ಖಾದರ್ ಹಾಜಿ, ಬಿ.ಕೆ. ಮೊಹಮ್ಮದ್, ವಿಕ್ಟರ್ ವೇಗಸ್, ಫ್ರಾನ್ಸಿಸ್ ಡಿ.ಸೋಜ, ರಝಾಕ್ ಕೆದಕ್ಕಾರ್, ಅಬೂಬಕ್ಕರ್ ಧರ್ಮನಗರ, ಕೆ.ಎಚ್ ಅಬೂಬಕ್ಕರ್, ಅಶ್ರಫ್ ಆನೆಕಲ್ಲು, ಮುಂತಾದವರು ಮಾತನಾಡಿದರು .  ಜಿಲ್ಲಾ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಮೀದ್ ಬೋರ್ಕಳ ಕಾರ್ಯಕ್ರಮ ನಿರೂಪಿಸಿದರು .

ಸಂಘಟಕರಾದ  ಸಿದ್ದೀಕ್ ಮಂಜೇಶ್ವರ, ಅಝೀಝ್ ಕಲ್ಲೂರು, ಅಬೂಸಾಲಿ ಗಾಂಧಿನಗರ, ಕಾಂಗ್ರೆಸ್ ಮುಖಂಡರಾದ ವಿನೋದ್ ಕುಮಾರ್ ಪಾವೂರು, ಸದಾಶಿವ ಕೆ, ಅಲಿ ಧರ್ಮನಗರ, ಇಮ್ತಿಯಾಝ್ ಅಹ್ಮದ್, ವಸಂತರಾಜ ಶೆಟ್ಟಿ, ಎ.ಎಂ.ಉಮರ್ ಕುಂಞ,  ಹಮೀದ್ ಕಣಿಯೂರು,  ರಾಬಿಯಾ, ವೇದಾ ಧರ್ಮನಗರ  ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ  45 ಮಂದಿ ರಕ್ತದಾನಗೈದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries