ಬದಿಯಡ್ಕ: ಎಡನೀರು ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಏ, 13ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಜರಗಲಿರುವುದು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಅನುಗ್ರಹ ಮತ್ತು ಆಶೀರ್ವಚನಗಳೊಂದಿಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ತಂತ್ರಿವರ್ಯ ಶ್ರೀರಾಮ ಭಟ್ ಕಾಟುಕುಕ್ಕೆ ಉಪಸ್ಥಿತರಿರುವರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ, ಉದ್ಯಮಿ ಮಧುಸೂದನ ಆಯರ್ ಮಂಗಳೂರು, ನಿವೃತ್ತ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣ ಭಟ್, ಪ್ರಸಿದ್ಧ ಎಲುಬು ರೋಗ ತಜ್ಞ ಡಾ. ನಾಗರಾಜ ಭಟ್, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ನಿತ್ಯಾನದ ಶೆಣೈ ಬದಿಯಡ್ಕ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಶಿವಶಂಕರ ನೆಕ್ರಾಜೆ, ಎಸ್.ಎನ್.ಮಯ್ಯ ಬದಿಯಡ್ಕ, ನಿವೃತ್ತ ಅಧ್ಯಾಪಕ ಮಾಧವ ಹೇರಳ, ಕೆ.ವಿ.ಬಾಲಕೃಷ್ಣ ಆಚಾರಿ ಕಳೇರಿ, ದಂತವೈದ್ಯೆ ಡಾ. ಉಮಾಮಹೇಶ್ವರಿ ಎ.ಎಸ್., ನಿವೃತ್ತ ಶಿಕ್ಷಕಿ ಸರಸ್ವತಿ ಟೀಚರ್ ಬೇಳ, ನಿವೃತ್ತ ಬ್ಯಾಂಕ್ ಪ್ರಬಂಧಕಿ ಭಾನುಮತಿ ಮೊದಲಾದವರು ಪಾಲ್ಗೊಳ್ಳುವರು.
ಶ್ರೀಕ್ಷೇತ್ರದ ಜೀರ್ಣೋದ್ಧಾರ ನಿಧಿ ಕೂಪನ್(2) ಡ್ರಾವನ್ನು ಏ.14ರಂದು ನಡೆಸಲು ತೀರ್ಮಾನಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಡ್ರಾ ನವಂಬರ್ 2ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಗಳಿಗೂ ಭಗವದ್ಭಕ್ತರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




