ಮಧೂರು: ಸಮಸ್ಯೆಗಳ ಮೂಲ ತಿಳಿದುಕೊಂಡು ಸಮಸ್ಯೆಗಳು ಬರುವ ಮುನ್ನವೇ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಕಂಡುಬರುವಂತಹ ಲವ್ ಜಿಹಾದ್, ಮತ ಪರಿವರ್ತನೆಯಂತ ಪಿಡುಗಗಳನ್ನು ತಡೆಗಟ್ಟಬಹುದು ಎಂದು ವಿಶ್ವ ಹಿಂದೂ ಪರಿಷತ್ ಕೇರಳದ ಮಾತೃಶಕ್ತಿ ಪ್ರಾಂತ್ಯ ಸಂಯೋಜಕಿ ಮಿನಿ ಹರಿಕುಮಾರ್ ಹೇಳಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯೆ ಅಂಗವಾಗಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸಗೈದು ಅವರು ಮಾತನಾಡಿದರು/
ಬೆಳೆದು ಬರುವ ಮಕ್ಕಳಲ್ಲಿ ಸ್ವಧರ್ಮದ ಕುರಿತಾದ ಪಾಠಗಳನ್ನು ಹೇಳಿಕೊಡಬೇಕು ಮತ್ತು, ಅದರ ಪಾಲನೆ ಮನೆಗಳಲ್ಲಿ ನಡೆಯಬೇಕು ಎಂದು ಹೇಳಿದರು. ವಿವಿಧ ವಲಯಗಳಲ್ಲಿ ಕಾರ್ಯವೆಸಗುವ ಧಾರ್ಮಿಕ ಮುಂದಾಳುಗಳು ಈ ನಿಟ್ಟಿನಲ್ಲಿ ಕರ್ತವ್ಯವೆಸಗಬೇಕು ಎಂದು ಅವರು ಹೇಳಿದರು.
ಉಡುಪಿ ಕಾಣಿಯೂರು ಮಠದ ಶ್ರೀಮದ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಸ್ವಾಮೀಜಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಹಿಂದೂ ಧರ್ಮದ ಒಳಗಿನ ವಿವಿಧ ಪಂಥಗಳು ಕೇವಲ ಮಾನವ ನಿರ್ಮಿತ. ವಿಷ್ಣು – ಈಶ್ವರರು ಹಾಲು – ತುಪ್ಪವಿದ್ದಂತೆ. ಹಾಲಿನಲ್ಲಿ ತುಪ್ಪದ ಅಂಶ ಅಡಕವಿರುವಂತೆಯೇ ಶಿವನಲ್ಲಿ ವಿಷ್ಣು, ವಿಷ್ಣುವಿನಲ್ಲಿ ಈಶ್ವರರು ಐಕ್ಯವಾಗಿದ್ದಾರೆ. ಆದರೆ ಮಾನವನು ಈರ್ವರ ನಡುವೆ ಕಂದಕ ಸೃಷ್ಟಿಸಿ ಕಿತ್ತಾಡುತ್ತಿರುವುದು ವಿಪರ್ಯಾಸ ಎಂದು ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ನುಡಿದರು.
ಹಿಂದೂ ಧರ್ಮದವರು ಒಟ್ಟಾಗಬೇಕು. ನಮ್ಮ ನಮ್ಮ ನಂಬಿಕೆಗಳು, ಸಂಪ್ರದಾಯಗಳು ನಮ್ಮಲ್ಲೇ ಇರಬೇಕು ಆದರೆ ಸಾರ್ವಜನಿಕವಾಗಿ ಬೆರೆಯುವ ಸಮಯದಲ್ಲಿ ಹಿಂದೂ ಎಂಬ ಭಾವನೆ ಮಾತ್ರ ನಮ್ಮೊಳಗಿರಲಿ ಎಂದು ಹೇಳಿದರು. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ಮೂಲ ಕಾರಣ ಮನಸ್ಸಿನ ಅಸಹಜ ಪ್ರವೃತ್ತಿ ಕಾರಣವಾಗಿದೆ. ಮನಸ್ಸಿನ ಒಳಗಿನ ದ್ವಂದ್ವಗಳೇ ಇದಕ್ಕೆ ಕಾರಣವಾಗಿದ್ದು, ರುದ್ರನ ನಾಮಸ್ಮರಣೆಯಿಂದ ಈ ದ್ವಂದ್ವ ಪರಿಸ್ಥಿತಿಯಿಂದ ಹೊರಗೆ ಬರಬಹುದು ಎಂದು ಅವರು ಹೇಳಿದರು. ಬ್ರಿಗೇಡಿಯರ್ ಐ.ಎನ್.ರೈ ಇಚ್ಲಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಹುಡ್ಕೋದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಕೆ.ರವೀಂದ್ರ ಆಳ್ವ ಕೋಟಕುಂಜ ಗೌರವ ಉಪಸ್ಥಿತಿ ಹೊಂದಿದ್ದರು. ಮುಖ್ಯ ಅತಿಥಿಗಳಾಗಿ ಮಲಬಾರ್ ದೇವಸ್ವಂ ಬೋರ್ಡ್ ನ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ವಿ.ಸುರೇಂದ್ರನ್, ಕರ್ನಾಟಕ ಮುಜರಾಯಿ ಇಲಾಖೆಯ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಶಂಕರ್ ಆದೂರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಎಂ.ಆರ್.ಜಿ ಹಾಸ್ಪಿಟಾಲಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ನ ಸಿಎಂಡಿ ಡಾ.ಕೆ ಪ್ರಕಾಶ್ ಶೆಟ್ಟಿ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗಡೆ ಕೊಡಿಬೈಲ್, ಉದ್ಯಮಿ ಸಂತೋμï ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪುರೋಹಿತ ರತ್ನ ಕೇಶವ ಆಚಾರ್ಯ ಉಳಿಯತ್ತಡ್ಕ, ಖ್ಯಾತ ಜ್ಯೋತಿಷಿ ಸಿ.ವಿ ಪೆÇದುವಾಳ್, ವಿಶ್ವನಾಥ ಭಟ್, ಯಶೋದಾ ನಾಯ್ಕ್, ಎಸ್.ಎನ್ ಮಯ್ಯ, ಡಾ.ಮೃಣಾಲ್ ರಾಘವನ್, ಡಾ.ಸುನಿಲ್ ಚಂದ್ರನ್ ಪಿ.ವಿ ಉಪಸ್ಥಿತರಿದ್ದರು. ಸುನಿಲ್ ಕುದ್ರೆಪ್ಪಾಡಿ ಸ್ವಾಗತಿಸಿ, ರವೀಂದ್ರ ರೈ ವಂದಿಸಿದರು. ಪ್ರಮೀಳಾ ಮಜಲ್ ನಿರೂಪಿಸಿದರು.




.jpg)
.jpg)
.jpg)
