ಕಾಸರಗೋಡು: ಪಳ್ಳಿಕ್ಕೆರೆ ಬೇಕಲಕೋಟೆ ಶಕ್ತಿನಗರದಲ್ಲಿರುವ ಶ್ರೀ ರವಳನಾಥ ಅಮ್ಮನವರು ಮಹಿಷ ಮರ್ದಿನಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ದೇವರಮನೆ ಬ್ರಹ್ಮಕಲಶೋತ್ಸವ ಮತ್ತು ಸಹಸ್ರ ಚಂಡಿಕಾ ಯಾಗ ಮಂಗಳವಾರ ಅರಂಭಗೊಂಡಿತು.
ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಪರಮಾನುಗ್ರಹದೊಂದಿಗೆ ತತ್ಕರಕಮಲ ಸಂಜಾತ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಅನುಗ್ರಹ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಏ. 29ರಿಂದ ಮೇ 7ರ ವರೆಗೆ ವಿವಿಧ ಸಾಂಸ್ಕøತಿಕ ದೈವಿಕ ಆಧ್ಯಾತ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯುವುದು. ಮಂಗಳವಾರ ಎಡನೀರುಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ಶ್ರೀ ಚಂಡಿಕಾ ಯಾಗದ ಪ್ರಧಾನ ಬೆಳ್ಳಿಕಲಶ ಮತ್ತು ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು. 30ರಂದು ಬ್ರಹ್ಮ ಕಲಶ ಪೂಜೆ, ಮೇ 1ರಂದು ನಾಗ ತಾನು ತರ್ಪಣ ಸೇವೆ, 2ರಂದು ಶ್ರೀ ಲಲಿತಾ ಸಹಸ್ರನಾಮಾರ್ಚನ, ಅಷ್ಟಾವಧಾನ ಸೇವೆ, 3ರಂದು ನಿರ್ಮಾಲ್ಯ ಪೂಜಾ ನವಾವರಣ ಪೂಜೆ, ಕನ್ಯಕಾ, ದಂಪತಿ ಪೂಜೆ, 4ರಂದು ದ್ವಾದಶಾಕ್ಷರಿ ಹೋಮ, 5ರಂದು ರುದ್ರಯಾಗ, 6ರಂದು ನಿರ್ಮಾಲ್ಯ ಪೂಜೆ ನವಾವರಣ ಪೂಜೆ, 7ರಂದು ಬೆಳಗ್ಗೆ 6ಕ್ಕೆ ಅರಣಿಮಥನದೊಂದಿಗೆ ಅಗ್ನಿ ಸ್ಥಾಪನೆ, ಸಹಸ್ರ ಚಂಡಿಕಾ ಯಾಗದ ಪ್ರಾರಂಭ, 11ಕ್ಕೆ ಶೃಂಗೇರಿ ತತ್ಕರಕಮಲ ಸಂಜಾತ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪೂರ್ಣಾಹುತಿ ನಡೆಯುವುದು.




