ಮಂಜೇಶ್ವರ: ವರ್ಕಾಡಿ ನೀರೊಳಿಕೆ ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರಿಮಾತಾ ಸೇವಾಶ್ರಮದ ದಶಮಾನೋತ್ಸವದ ಅಂಗವಾಗಿ ಚಂಡಿಕಾ ಯಾಗ, ಧಾರ್ಮಿಕ ಸಭಾ ಕಾರ್ಯಕ್ರಮ ಏ. 27ರಂದು ನಡೆಯುವುದು. ಕಾರ್ಯಕ್ರಮದ ಅಂಗವಾಗಿ ಅರ್ಧ ಏಕಾಹ ಭಜನೆ ಶನಿವಾರ ಆರಂಭಗೊಂಡಿತು. ವಾಸ್ತುಹೋಮ, ರಾಕ್ಷೋಘ್ನ ಹೋಮ ನಡೆಯಿತು.
27ರಂದು ಬೆಳಗ್ಗೆ 6.13ಕ್ಕೆ ಅರ್ಧ ಏಕಾಹ ಭಜನಾ ಮಂಗಲೋತ್ಸವ, 7ಕ್ಕೆ ಚಂಡಿಕಾ ಹೋಮ ಆರಂಭ, 11ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿ ನಡೆಯುವುದು. 11.30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 1.30ಕ್ಕೆ ಕಿನ್ಯ ಕೇಶವ ಶಿಶುಮಂದಿರದ ಬಾಲ ಕಲಾವಿದರಿಂದ 'ವ್ರತಿ ಸೌಮಿತ್ರಿ ತರಣಿ ಸೇನ ಕಾಳಗ'ಯಕ್ಷಗಾನ ನಡೆಯುವುದು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡ. ಪ್ರಭಾಕರ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು.

