ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಸುಂಕ ನೀತಿ ವಿಚಾರದಲ್ಲಿ ಭಾರತ ಅನುಸರಿಸಿದ ಕಾರ್ಯಕತಂತ್ರವು ಜಾಣ ನಡೆಯಾಗಿದೆ. ಇದು ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಮಾಲೋಚನೆಗಳಿಗೆ, ಅಮೆರಿಕದಲ್ಲಿ ಭಾರತದ ಮಾರುಕಟ್ಟೆ ವಿಸ್ತರಣೆಗೆ ದಾರಿ ಮಾಡಿಕೊಡಲಿದೆ ಎಂದು ವ್ಯಾಪಾರ ಸಲಹೆಗಾರ ಮಾರ್ಕ್ ಲಿನ್ಸ್‌ಕಾಟ್ ಹೇಳಿದ್ದಾರೆ.
ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ಫೋರಂ (ಯುಎಸ್‌ಐಎಸ್‌ಪಿಎಫ್)ನಲ್ಲಿ ವ್ಯಾಪಾರ ಸಲಹೆಗಾರರಾಗಿರುವ ಮಾರ್ಕ್, ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಭಾರತವನ್ನುಈ ರೀತಿ ಶ್ಲಾಘಿಸಿದ್ದಾರೆ. ವಿಪಕ್ಷಗಳಿಂದ ತೀವ್ರ ವಿರೋಧ ಎದುರಿಸಿದರೂ ಪ್ರಧಾನಿ ಮೋದಿ ಅವರ ಸರ್ಕಾರ ಸುಂಕ ನೀತಿ ವಿಚಾರದಲ್ಲಿ ಪ್ರತೀಕಾರಕ್ಕೆ ಆದ್ಯತೆ ನೀಡದೆ ರಾಜತಾಂತ್ರಿಕತೆಗೆ ಪ್ರಾಮುಖ್ಯ ನೀಡಿದ್ದು ಸರಿಯಾದ ನಿರ್ಧಾರ ಎಂದೂ ಬಣ್ಣಿಸಿದ್ದಾರೆ.




