ಕಾಸರಗೋಡು: ಬೆಂಗಳೂರಿನ ವಿ.ಕೆ.ಎಂ ಕಲಾವಿದರು (ರಿ )ನೇತೃತ್ವದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಸಹಯೋಗದಲ್ಲಿ ಕರ್ನಾಟಕ ಗಡಿನಾಡ ಉತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳನ್ನು ಪ್ರದರ್ಶಿಸಲಾಯಿತು.
ವಿ. ಕೆ. ಎಂ.ಕಲಾವಿದರು (ರಿ), ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ. ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ ನಾಟಕ ಪ್ರದರ್ಶಿಸಲಾಯಿತು.
ರೂಪ ಕಲಾನಿಕೇತನ, ಬೆಂಗಳೂರು ಅವರಿಂದ ಎನ್.ಎಸ್.ರಾವ್ ವಿರಚಿತ ವರ ಭ್ರಷ್ಟ ಕನ್ನಡ ನಾಟಕ, ರಂಗಸೇತುವೆ ಟ್ರಸ್ಟ್, ಬೆಂಗಳೂರು ಅವರಿಂದ ಅಂಗುಲಿಮಾಲಾ, ಬೆಂಗಳೂರಿನ ವಿ. ಕೆ. ಎಂ. ಕಲಾವಿದರಿಂದ ರಣದುಂಧುಬಿ, ರಂಗ ಪರಿಸರ ಧಾರವಾಡ ಅಭಿನಯಿಸಿದ ಖರೇ ಖರೇ ಸಂಗ್ಯಾ ಬಾಳ್ಯ ಹಾಗೂ ಕೆ. ಲಕ್ಷ್ಮಣ ಸುವರ್ಣ ಬೆಂಗಳೂರು ಅವರಿಂದ ಸುಗಮ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.





